ಬೆಳಗಾವಿ, ಏ.23: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೂಲತಃ ಅಥಣಿ ತಾಲ್ಲೂಕಿನ ಚಿಕ್ಕೂಡ ಗ್ರಾಮದ ನಬೀಸಾಬ್ ಬಿ. ರಾಜಾಪುರ(62) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.
ಬೆಳಗಾವಿ ನಗರದ ಸಿವಿಲ್ ಆಸ್ಪತ್ರೆ ಎದುರಗಡೆ ನೂರಾನಿ ಮಸೀದಿಯ ಖಬರಸ್ತಾನ್ ದಲ್ಲಿ ಮಧ್ಯಾಹ್ನ 1.30 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ, ಉಪ ನಿರ್ದೇಶಕ ಗುರುನಾಥ ಕಡಬೂರ ಹಾಗೂ ಪತ್ರಿಕಾ ಬಳಗದವರು ನಬೀಸಾಬ್ ರಾಜಾಪುರೆ ಅವರ ಅಗಲುವಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
****