ಕಡೋಲಿ: ಭಾರೀ ಮಳೆಗೆ ಬುಧವಾರ ರಾತ್ರಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಹಳೆ ಮನೆಯೊಂದು ಭಾಗಶಃ ಕುಸಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಹಾನಿಗೊಳಗಾದ ಮನೆ ಪತ್ರಕರ್ತ ಸುನೀಲ್ ಶಂಕರ ಪಾಟೀಲ ಎಂಬುವರಿಗೆ ಸೇರಿದ್ದು. ಮೂಲಗಳ ಪ್ರಕಾರ, ಕುಟುಂಬದ ಸದಸ್ಯರು ರಾತ್ರಿ ಊಟ ಮಾಡುವಾಗ, ಮನೆಯ ಗೋಡೆ ಬಿಳುತ್ತಿರುವ ಬಗ್ಗೆ ನೆರೆಹೊರೆಯವರು ಎಚ್ಚರಿಸಿದ್ದಾರೆ. ಮನೆ ಗೋಡೆ ಕುಸಿಯುವ ಮೊದಲು, ಪಾಟೀಲ್ ಕುಟುಂಬ ಸದಸ್ಯರು ಸುರಕ್ಷಿತ ಸ್ಥಳಕ್ಕೆ ಸ್ಥಲಾಂತರಗೋಂಡರು.
ಸೂಚನೆ ಮೇರೆಗೆ ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಾಬಾಯಿ ಭಂಡಾರಿ, ಗ್ರಾಮ ಲೆಕ್ಕಾಧಿಕಾರಿ ಆರೀಫ್ ಮುಲ್ಲಾ, ಪಂಚಾಯಿತಿ ಅಧ್ಯಕ್ಷ ಸಾಗರ ಪಾಟೀಲ, ಪಂಚಾಯಿತಿ ಸದಸ್ಯರಾದ ರಾಜು ಮಾಯಣ್ಣ, ಪ್ರೇಮಾ ನರೋಟಿ ಮತ್ತಿತರರು ಭೇಟಿ ನೀಡಿ, ಪರಿಶಿಲಿಸಿದರು.
ತಾಲೂಕಿನ ಕಡೋಲಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಪಾಟೀಲ ಎಂಬುವವರ ಕುಸಿದ ಮನೆಯನ್ನು ಪಿಡಿಒ ಕೃಷ್ಣಾಬಾಯಿ ಭಂಡಾರಿ, ಗ್ರಾಮ ಲೆಕ್ಕಿಗ ಆರಿಫ್ ಮುಲ್ಲಾ ಇತರರೊಂದಿಗೆ ಪರಿಶೀಲಿಸಿದರು.