ಬೆಳಗಾವಿ: ಇತ್ತೀಚಿಗೆ ನಿಧನ ಹೊಂದಿರುವ ಜಿಲ್ಲೆಯ ಹಿರಿಯ ಪತ್ರಕರ್ತರಾದ ಅಥಣಿಯ ಚನ್ನಯ್ಯ ಇಟ್ನಾಳಮಠ ಮತ್ತು ಚಿಕ್ಕೋಡಿಯ ವಿರೂಪಾಕ್ಷ ಕವಟಗಿ ಅವರ ಶ್ರದ್ಧಾಂಜಲಿ ಸಭೆಯನ್ನು ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿಯ ವಾರ್ತಾ ಭವನದಲ್ಲಿ ಮಂಗಳವಾರ ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಅವರು, ಇಬ್ಬರೂ ಪತ್ರಕರ್ತರ ಅಕಾಲಿಕ ನಿಧನದ ಕುರಿತು ಸಂತಾಪ ವ್ಯಕ್ತಪಡಿಸಿದರು. ಅಲ್ಲದೆ, ಮಡಿದ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವಂತೆ ಕೋರಿ ಶೀಘ್ರವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ನೌಶಾದ ಬಿಜಾಪುರ, ರಾಜು ಗವಳಿ, ಶ್ರೀಶೈಲ ಮಠದ, ರವೀಂದ್ರ ಉಪ್ಪಾರ, ಸಂಜಯ ಸೂರ್ಯವಂಶಿ, ಮುನ್ನಾ ಬಾಗವಾನ, ಮಲ್ಲಿಕಾರ್ಜುನ ಗೌಡರ, ಸದಾಶಿವ ಸಂಕಪಗೋಳ, ವಾರ್ತಾ ಇಲಾಖೆಯ ಅಧಿಕಾರಿ ವಿಜಯ ಬೆಟಗೇರಿ ಮೊದಲಾದವರು ಮಾತನಾಡಿ ಇಬ್ಬರೂ ಪತ್ರಕರ್ತರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಪತ್ರಕರ್ತರಾದ ಕೇಶವ ಆದಿ, ಸುರೇಶ ನೇರ್ಲಿ, ಚಂದ್ರಕಾಂತ ಸುಗಂಧಿ, ತುಷಾರ ಮಜುಕರ, ಇಮಾಮ ಗೂಡುನವರ, ರಾಜು ಹಿರೇಮಠ, ಡಿ ವಿ ಕಮ್ಮಾರ, ಅರುಣ ಯಳ್ಳೂರಕರ, ಪರಶುರಾಮ, ಸಾಗರ ಚೌಗಲೆ, ಪುಂಡಲೀಕ ಬಡಿಗೇರ ಪ್ರಶಾಂತ್ ಮನ


ಗಾವಿ ಮೊದಲಾದವರು ಉಪಸ್ಥಿತರಿದ್ದರು.





























