ಸವಿತಾ ಕಾಂಬಳೆ ಬೆಳಗಾವಿ ಮೇಯರ್ ಆಗಿ ಆಯ್ಕೆ

ಸವಿತಾ ಕಾಂಬಳೆ ಬೆಳಗಾವಿ ಮೇಯರ್ ಆಗಿ ಆಯ್ಕೆ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗೆ ಸವಿತಾ ಕಾಂಬಳೆ ಮೇಯರ್ ಆಗಿ ಆಯ್ಕೆಯಾದರೆ ಉಪ ಮೇಯರ್ ಸ್ಥಾನಕ್ಕೆ ಆನಂದ ಚೌಹಾನ್ ಆಯ್ಕೆಯಾಗಿದ್ದಾರೆ.

ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಮಹಿಳೆಗೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಒಲಿದಿದ್ದು ಹೊಸ ಇತಿಹಾಸ ಸೃಷ್ಟಿಸುವಲ್ಲಿ ಬಿಜೆಪಿ ಸಫಲವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಕಮಲ ತೆಕ್ಕೆಗೆ ಸೇರಿತ್ತು. ರಾಜ್ಯದೆ ಎರಡನೇ ಅತಿದೊಟ್ಟ ಮಹಾನಗರ ಪಾಲಿಕೆ ಎಂಬ ಖ್ಯಾತಿ ಹೊಂದಿರುವ ಬೆಳಗಾವಿ ಪಾಲಿಕೆಗೆ ಸಧ್ಯ ಮಹಿಳಾ ಸಾರಥಿ ಯಾಗಿರುವುದು ವಿಶೇಷ.ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಸವಿತಾ ಕಾಂಬಳೆ ಎಂಬುವವರು ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸಂಸಾರದ ಏರುಪೇರಿನಿಂದ ಬೆಳಗಾವಿ ಮಹಾನಗರ ಸೇರಿದ್ದ ಸವಿತಾ ಇಲ್ಲಿಯೇ ಮನೆಗಳಲ್ಲಿ ಕೆಲಸ ಮಾಡುತ್ತಾ ಬದುಕು ನಡೆಸಿದ್ದಳು. ಈ ಮಧ್ಯೆಯೇ ಸವಿತಾ ನಗರದ ಸರ್ದಾರ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವರೆಗೆ ವಿಧ್ಯಾಭ್ಯಾಸ ಮಾಡಿದ್ದರು.

ಬದುಕಿನ ಜಂಜಾಟಗಳ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೇ ಮಾಡಿದ ಸವಿತಾ ಅವರು ಪಾಲಿಕೆ ಸಧಸ್ಯೆಯಾಗಿ ಆಯ್ಕೆಯಾಗಿದ್ದರು. ನಮ್ಮನ್ನು ಗೆಲ್ಲಿಸಿದ ಜನರ ಸೇವೆ ಮಾಡುತ್ತಾ ರಾಜಕೀಯವಾಗಿ ಬೆಳೆದ ಸವಿತಾ ಅವರಿಗೆ ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳೇ ಬದುಕಿನ ದಾರಿದೀಪವಾಗಿದೆ.

ಸಧ್ಯ ಸವಿತಾ ಅವರು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಸಮಾನತೆ ಮೂಲಮಂತ್ರ ಬೆಳಗಾವಿಯಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಪಕ್ಷದಲ್ಲಿ ನೊಂದ ತಳ ಸಮುದಾಯದವರಿಗೂ ಅವಕಾಶ ಸಿಗುತ್ತದೆ ಎಂಬುದಕ್ಕೆ ಸವಿತಾ ಅವರೇ ನಿದರ್ಶನ. ಸವಿತಾ ಕಾಂಬಳೆ ಅವರು ಮೇಯರ್ ಆಗಿ ಆಯ್ಕೆಯಾಗಲು ಸ್ಥಳೀಯ ಶಾಸಕ ಅಭಯ್ ಪಾಟೀಲ್ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಅವರ ಶ್ರಮ ಸಾಕಷ್ಟಿದೆ. ಜೊತೆಗೆ ಅವಕಾಶ ಕಲ್ಪಿಸಿದ ಬಿಜೆಪಿ ಪಕ್ಷಕ್ಕೂ ಇವರು ಕೃತಜ್ಞತೆ ಸಲ್ಲಿಸಿದ್ದಾರೆ.