![]() |
![]() |
![]() |
![]() |
![]() |
ಬೆಂಗಳೂರು, ಏ 10 ಗುಜರಾತ್ ಅಮುಲ್ ಹಾಲು ಮಾರಾಟವನ್ನು ವಿರೋಧಿಸಿ ಈ ಮೊದಲು -ಕಾಮರ್ಸ್ ಅಡಿಯಲ್ಲಿ ಅಮುಲ್ ಹಾಲು, ಮೊಸರು ಮಾರಾಟ ಮಾಡಿದರೆ ಮುಂದಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಎಚ್ಚರಿಗೆ ಕೊಟ್ಟಿದೆ. ಏಪ್ರಿಲ್ 8ರಂದು ಟ್ವೀಟ್ ಮಾಡಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ.ಟಿ.ಎ ಈ ಬಗ್ಗೆ ಟ್ವೀಟ್ ಮಾಡಿರುವ ಕರವೇ ರಾಜಾಧ್ಯಕ್ಷರಾದ ನಾರಾಯಣಗೌಡ್ರು.ಟಿ.ಎ ಅವರು, ‘ಇ-ಕಾಮರ್ಸ್ ಅಡಿಯಲ್ಲಿ ಅಮುಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ.
ಈ ಸಂಸ್ಥೆಗಳು ಅಮುಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ’ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಅವರು ಅಮುಲ್ ವಿರುದ್ಧ ಆಕ್ರೋಶ್ ಹೊರಹಾಕಿದ್ದರು. ಮತ್ತು ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದ ಮಾರುಕಟ್ಟೆಗಳಲ್ಲಿ ಗುಜರಾತ್ ಮೂಲದ ಡೈರಿ ಸಹಕಾರ ಸಂಸ್ಥೆಯ ಅಮೂಲ್ ಹಾಲಿನ್ ಮಾರಾಟವನ್ನು ವಿರೋಧಿಸಿ ಕರವೇ ಮೊದಲೇ ಎಚ್ಚರಿಕೆ ನೀಡಿತ್ತು. ಅಮೂಲ್ ನಂದಿನಿ ವಿಚಾರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಬಣ್ಣವನ್ನು ಪಡೆದುಕೊಂಡಿದ್ದು, ಬಿಜೆಪಿ ಸಿಟಿ ರವಿ, ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಸಮರ್ಥಿಸಿಕೊಂಡರೇ ಕಾಂಗ್ರೆಸ್ನ ಎಲ್ಲ ನಾಯಕರು ವಿರೋಧಿಸಿದ್ದರು.
ಕರ್ನಾಟಕದ ಎಲ್ಲ ಬ್ಯಾಂಕುಗಳನ್ನು ನುಂಗಿ ನೀರು ಕುಡಿದ ಈ ಗುಜರಾತಿನವರು ಈಗ ದೇಶದ ಬಹುದೊಡ್ಡ ಹಾಲಿನ ಉದ್ಯಮಕ್ಕೆ ಕೈಹಾಕಿ ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ಯಪಡಿಸಿದ್ದರು. ಅಲ್ಲದೆ ಗುಜರಾತ್ ಸಂಸ್ಥೆ ಕರ್ನಾಟಕದಲ್ಲಿ ಕಾಲಿಟ್ಟರೆ ನಿಶ್ಚಿತವಾಗಿ ಅದು ನಮ್ಮ ರೈತರ ಹಾಗೂ ಅವರ ಹೈನೋದ್ಯಮಕ್ಕೆ ಹೊಡೆದ ಕೊನೆಯ ಮೊಳೆಯಾಗಿರುತ್ತದೆ ಎಂದು ಟೀಕೆಗಳು ಕೇಳಿ ಬಂದಿವೆ.
![]() |
![]() |
![]() |
![]() |
![]() |