This is the title of the web page
This is the title of the web page

ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ ಅವರಿಗೆ ಅತ್ಯುತ್ತಮ ಚುನಾವಣಾಧಿಕಾರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ಪ್ ಪ್ರಶಸ್ತಿ ಪ್ರಧಾನ 

ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ ಅವರಿಗೆ ಅತ್ಯುತ್ತಮ ಚುನಾವಣಾಧಿಕಾರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ಪ್ ಪ್ರಶಸ್ತಿ ಪ್ರಧಾನ 

 

ಬೆಳಗಾವಿ: ಅತ್ಯುತ್ತಮ ಚುನಾವಣೆ ಪದ್ದತಿಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ ಅವರಿಗೆ ಅತ್ಯುತ್ತಮ ಚುನಾವಣೆ ಪದ್ದತಿಗಳ ಸಹಾಯಕ ಚುನಾವಣಾಧಿಕಾರಿ ಪ್ರಶಸ್ತಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮತದಾರರ ದಿನಾಚರಣೆ ಅಂಗವಾಗಿ ಶನಿವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಿದರು.

2024-25 ನೇ ಸಾಲಿನ ನಡೆದ ಲೋಕಸಭಾ ಚುನಾವಣೆಯ‌ ಸಮಯದಲ್ಲಿ ರಾಯಚೂರಿನಲ್ಲಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಚುನಾವಣಾ ಆಯೋಗ ಗುರುತಿಸಿ 2024-25ನೇ ಸಾಲಿನ ಅತ್ಯುತ್ತಮ ಚುನಾವಣೆ ಪದ್ದತಿಗಳ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸುಭಾಷ್ ಸಂಪಗಾಂವಿ ಅವರ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.