ಬೆಳಗಾವಿಯಲ್ಲಿ ಕಂಗೊಳಿಸಿದ `ಆಧ್ಯಾತ್ಮಿಕ ಜಾತ್ರೆ’ 53 ಶೇಷ ವಸ್ತ್ರಗಳ ಶೋಭೆ, 53 ನದಿನೀರಿನ ಅಭಿಷೇಕದ ವೈಭವ, ಮನೆಮನೆಗೂ ಶ್ರೀಗಳ ಆಶೀರ್ವಾದ

ಬೆಳಗಾವಿಯಲ್ಲಿ ಕಂಗೊಳಿಸಿದ `ಆಧ್ಯಾತ್ಮಿಕ ಜಾತ್ರೆ’ 53 ಶೇಷ ವಸ್ತ್ರಗಳ ಶೋಭೆ, 53 ನದಿನೀರಿನ ಅಭಿಷೇಕದ ವೈಭವ, ಮನೆಮನೆಗೂ ಶ್ರೀಗಳ ಆಶೀರ್ವಾದ

ಬೆಳಗಾವಿ. : ಗಡಿನಾಡದ ಹೃದಯಭಾಗ ಬೆಳಗಾವಿ ಕಳೆದ ಐದು ದಿನಗಳ ಕಾಲ ಭಕ್ತಿಸಾಗರದಲ್ಲಿ ತೇಲಿತು. ದಿ. 11ರಿಂದ 15ರವರೆಗೆ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಧಾಮರ್ಿಕ ಪ್ರವಾಸ ನಗರದೆಲ್ಲೆಡೆ ಆಧ್ಯಾತ್ಮಿಕ ಸ್ಪಂದನೆ ಮೂಡಿಸಿತು.
ವೇದಘೋಷ, ಮಂಗಳವಾದ್ಯ, ಆರತಿ ಬೆಳಕು ಎಲ್ಲವೂ ಒಂದೇ ಸ್ವರದಲ್ಲಿ ಭಕ್ತಿ ಭಾವದ ಮಹೋತ್ಸವಕ್ಕೆ ಸಾಕ್ಷಿಯಾದವು.
ರಾಣಿ ಚನ್ನಮ್ಮನಗರದ ಸತ್ಯಪ್ರಮೋದ ಸಭಾಗೃಹದಲ್ಲಿ ಭಕ್ತರು 53 ಶೇಷವಸ್ತ್ರಗಳನ್ನು ಸಮಪರ್ಿಸಿ ಅಪೂರ್ವ ಗೌರವ ಸಲ್ಲಿಸಿದರು. ಅದೇ ಕ್ಷಣದಲ್ಲಿ ದೇಶದ ಪವಿತ್ರ ತೀರ್ಥಕ್ಷೇತ್ರಗಳನ್ನು ಪ್ರತಿನಿಧಿಸುವ 53 ನದಿಗಳ ನೀರಿನಿಂದ ಅಭಿಷೇಕ ನೆರವೇರಿತು.
ಆ ಕ್ಷಣಗಳಲ್ಲಿ ಸಭಾಂಗಣವೇ ಜಯ ಜಯ ಮಂತ್ರ ಘೋಷದಿಂದ ಮೆರಗುಗೊಂಡಿತ್ತು.
ರಾಯರಮಠದಲ್ಲಿ ದೈವಿಕ ಸ್ಪಂದನೆ
ಮಾಳಮಾರುತಿಯ ರಾಯರಮಠದಲ್ಲಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಮಠದ ಅಧ್ಯಕ್ಷ ವಿ.ಎನ್. ಪಾಟೀಲರು ಕುಟುಂಬ ಸಮೇತ ಪೂಜೆಯಲ್ಲಿ ಭಾಗಿಯಾಗಿ ಆಶೀವರ್ಾದ ಪಡೆದರು. ಪೂಜಾ ವಿಧಾನದ ವೇಳೆ ವೇದಪಾರಾಯಣದ ಘೋಷ ಮಠದ ವಾತಾವರಣವನ್ನು ಇನ್ನಷ್ಟು ಪಾವನಗೊಳಿಸಿತು.

ಮನೆಮನೆಗೂ ಶ್ರೀಗಳ ಪಾದಸ್ಪರ್ಶ
ನಗರದ ಖ್ಯಾತ ಉದ್ಯಮಿ ರಾಜೇಂದ್ರ ದೇಸಾಯಿ ಸೇರಿದಂತೆ ಅನೇಕ ಭಕ್ತರ ಮನೆಗಳಿಗೆ ತೆರಳಿ ಶ್ರೀಗಳು ಪಾದಪೂಜೆ ಸ್ವೀಕರಿಸಿದರು. ಫಲ, ಮಂತ್ರಾಕ್ಷತೆ ನೀಡಿ ಆಶೀವರ್ಾದ ಮಾಡಿದ ಶ್ರೀಗಳ ದರ್ಶನಕ್ಕೆ ಮಹಿಳೆಯರು, ಹಿರಿಯರು, ಯುವಕರು ಸಾಲುಗಟ್ಟಿ ನಿಂತ ದೃಶ್ಯ ಭಕ್ತಿಯ ನಿಜ ರೂಪವೇ ಸರಿ.

ಶಿಕ್ಷಣ ಸೇವೆಗೆ ಆಶೀವರ್ಾದದ ಮುದ್ರೆ
ಬಿ.ಕೆ. ಮಾಡಲ್ನಲ್ಲಿ ಶ್ರೀಗಳ ಹೆಸರಿನಲ್ಲಿ ಆರಂಭವಾದ ಶ್ರೀ ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ನೂತನ ಪ್ರಯೋಗಾಲಯವನ್ನು ಶ್ರೀಗಳು ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ವಿಲಾಸ ಜೋಶಿ, ಕಾರ್ಯದಶರ್ಿ ಶ್ರೀಧರ ಹುಕ್ಕೇರಿ, ಪ್ರಜ್ವಲ ಕುಲಕಣರ್ಿ, ಪಂಡಿತ ವಿದ್ಯಾಧೀಶಾಷಾರ್ಯ ಗುತ್ತಲ, ಸಂಜೀವ ಮೋರಪ್ಪನವರ, ಪಾಲಿಕೆ ಉಪಮೇಯರ್ ವಾಣಿ ಜೋಶಿ, ರಾಜೇಂದ್ರ ಕುಲಕಣರ್ಿ, ಅವಿನಾಶ ಪೋತದಾರ, ಶಿವಣಗಿ, ಅರವಿಂದ ಹುನಗುಂದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಸ್ಕಾರವಿಲ್ಲದ ಶಿಕ್ಷಣ ಸಮಾಜಕ್ಕೆ ಅಪೂರ್ಣ. ಜ್ಞಾನ ಮತ್ತು ಧರ್ಮ ಜೊತೆಯಾದಾಗ ರಾಷ್ಟ್ರದ ಭವಿಷ್ಯ ಉಜ್ವಲವಾಗುತ್ತದೆ, ಎಂಬ ಶ್ರೀಗಳ ಸಂದೇಶ ವಿದ್ಯಾಥರ್ಿ ಪೋಷಕರಲ್ಲಿ ಹೊಸ ಪ್ರೇರಣೆ ಮೂಡಿಸಿತು.

ನೇಮಕಾತಿ ಪತ್ರ ವಿತರಣೆ
ಬೆಳಗಾವಿ ಎಸ್ಇಎಸ್ ಸೊಸೈಟಿಯ ನೂತನ ಆಡಳಿತ ಮಂಡಳಿ ಸದಸ್ಯರಿಗೆ ಶ್ರೀ ಸತ್ಯಾತ್ಮತೀರ್ಥರು ನೇಮಕಾತಿ ಪತ್ರಗಳನ್ನು ವಿತರಿಸಿದರು.
ಸಂಸ್ಥೆ ಸೇವಾಭಾವದಿಂದ ಬೆಳೆಯಬೇಕು, ಅಧಿಕಾರ ಜವಾಬ್ದಾರಿಯೊಂದಿಗೆ ಸಾಗಬೇಕು, ಎಂದು ಮಾರ್ಗದರ್ಶನ ನೀಡಿದರು.
ಗಡಿನಾಡಲ್ಲಿ ಶ್ರೀಗಳ ಪಂಚದಿನಗಳ ಈ ಪ್ರವಾಸವು ಕೇವಲ ಧಾಮರ್ಿಕ ಕಾರ್ಯಕ್ರಮಗಳ ಸರಮಾಲೆಯಲ್ಲ ಅದು ಭಕ್ತಿ, ಸಂಸ್ಕೃತಿ, ಶಿಕ್ಷಣ ಮತ್ತು ಸಮಾಜಸೇವೆಯ ಸಂಯೋಜನೆಯ ಜೀವಂತ ಸಂದೇಶವಾಯಿತು,