ಯಮಕನಮರಡಿ:- ಸಮೀಪದ ಹೆಬ್ಬಾಳ ಗ್ರಾಮ ಪಂಚಾಯತನ ವ್ಯಾಪ್ತಿಯ ವಾರ್ಡ ನಂ-೩ ಹಾಗೂ ವಾರ್ಡ ನಂ-೪ರಲ್ಲಿ ವಾಸಿಸುವ ಜನರಿಗೆ ಕಳೆದ ೧೮-೨೦ ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲಾ ಎಂದು ಮಂಗಳವಾರ ದಿ. ೬ ರಂದು ಗ್ರಾಮ ಪಂಚಾಯತನ ಕಛೇರಿ ಎದುರು ಖಾಲಿ ಕೋಡಗಳನ್ನು ಪ್ರದರ್ಶೀಸಿ ಪ್ರತಿಭಟನೆ ಮಾಡಿ ತಮ್ಮ ವಾರ್ಡುಗಳಿಗೆ ಸಮರ್ಪಕ ನೀರು ಪೂರೈಸಬೇಕೆಂದು ಆಗ್ರಹಿಸಿದರು,
ಆದರೆ ದೃರಾದೃಷ್ಟವೆಂಬAತೆ ಈ ಜನರ ನೀರಿನ ಸಮಸ್ಯೆಯನ್ನು ಕೆಳಲು ಗ್ರಾಮ ಪಂಚಾಯತನ ಅಭಿವೃಧ್ದಿ ಅಧಿಕಾರಿಗಳಾಗಲೀ ಯಾವೋಬ್ಬ ಆಡಳಿತ ಮಂಡಳಿಯ ಸದಸ್ಯರಾಗಲಿ ಸ್ಥಳಕ್ಕೆ ಬಾರದಿರುವುದು ಜನರಿಗೆ ಮತ್ತಷ್ಟು ಸಹನೆಯ ಕಟ್ಟೆ ಮೀರುವಂತೆ ಮಾಡಿತು,
ಕೆಲ ಸಮಯ ಜನರು ಪ್ರತಿಭಟಿಸಿ ಯಾರು ತಮ್ಮ ಸಮಸ್ಯೆಗೆ ಸ್ಪಂದಿಸದೇ ಇದ್ದಾಗ ಗ್ರಾಮ ಪಂಚಾಯತನ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತನಲ್ಲಿ ಲೆಕ್ಕ ಪರಿಶೋಧನೆಗಾಗಿ ಬಂದ ಕೆಲ ಸಿಬ್ಬಂದಿಗಳನ್ನು ಹೊರಹಾಕಿ ಮಹಿಳೆಯರು ಹಾಗೂ ಬಂದ ಕೆಲ ಗ್ರಾಮದ ಪುರುಷರು ಗ್ರಾಮ ಪಂಚಾಯತನ ಕಾರ್ಯಲಯಕ್ಕೆ ಬೀಗ ಜಡಿದು ಪ್ರತಿಭಟಿಸಿ ತಮ್ಮ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು,
ಕಳೆದ ೨೦ ದಿನಗಳಿಂದ ಗ್ರಾಮಕ್ಕೆ ಕುಡಿ ನೀರು ಸರಬರಾಜು ಆಗುತ್ತಿಲ್ಲಾ ಗ್ರಾಮ ಪಂಚಾಯತನವರು ಬೊರವೆಲ್ ನೀರನ್ನು ಈಗಷ್ಟೆ ಬಿಟ್ಟಿದ್ದರು ಕೆಲ ವಲಯದಲ್ಲಿ ಬಿಟ್ಟಿದ್ದರು ಅದು ಕುಡಿಯಲು ಯೋಗ್ಯವಲ್ಲದ ನೀರು ಇರುವುದರಿಂದ ಸಾರ್ವಜನಿಕರು ಆ ನೀರನ್ನು ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದಾರೆ ಎಂದು ಜನರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ,
ಹೆಬ್ಬಾಳ ಗ್ರಾಮ ಪಂಚಾಯತಿಗೆ ಇತ್ತೀಚಿನ ದಿನಗಳಲ್ಲಿ ದಿಕ್ಕಿಲ್ಲದಂತಾಗಿದೆ ಜನರ ಹಲವಾರು ಸಮಸ್ಯೆಗಳಿದ್ದರು ಆ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಿಲ್ಲಾ ಗ್ರಾಮದಲ್ಲಿನ ನೀರಿನ ಸಮಸ್ಯೆಯಂತೂ ವಿಕೋಪಕ್ಕೆ ಹೋಗಿದೆ ಎಂದು ಜನರು ಕೆಂಡಾ ಮಂಡಲರಾಗಿ ನುಡಿದರು, ನಂತರ ಕೆಲ ಅಧಿಕಾರಿಗಳು ಬೀಗ ತೆಗೆಸುವಂತೆ ಪ್ರತಿಭಟಣಾಕಾರರ ಮನವಲಿಸಲು ಮುಂದಾದರೂ ಕೂಡಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯತನ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಜನರು ಪಟ್ಟು ಹಿಡಿದು ಬೀಗ ಕೊಡಲು ಒಪ್ಪಲಿಲ್ಲಾ,
ಈ ಸಂದರ್ಭದಲ್ಲಿ ಶ್ರೀಮತಿ ಮಹಾದೇವಿ ಮಠಪತಿ, ಗೌರಿ ಗಣಾಚಾರಿ, ಮಹಾದೇವಿ ಅಮ್ಮಣಗಿ, ಮಹಾದೇವಿ ಮಠಪತಿ, ಸವಿತಾ ಪಾಟೀಲ, ರಾವಸಾಹೇಬ ಪಾಟೀಲ, ರಾಜು ಮಠಪತಿ, ಹಾಗೂ ಗ್ರಾಮದ ಸುಮಾರು ೧೦೦ ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಉಸ್ಥಿತರಿದ್ದರು,
** ಕಳೆದ ೨೦ ದಿನಗಳಿಂದ ಗ್ರಾಮಕ್ಕೆ ಕುಡಿ ನೀರು ಸರಬರಾಜು ಆಗುತ್ತಿಲ್ಲಾ ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಇಂದಿಗೂ ನೀರಿನ ಬವನೆ ನಿಗಿಲ್ಲಾ,
-ರಾವಸಾಹೇಬ ಪಾಟೀಲ,