ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆ ಭಾರತೀಯ ಜನತಾ ಪಕ್ಷದ ಕೋಟೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಶಾಸಕರು ಆರಿಸಿ ಬರಬೇಕಾಗಿದೆ.ಜಿಲ್ಲೆಯಲ್ಲಿ ಕಂಡುಬಂದ ಅಭೂತಪೂರ್ವ ಜನ ಬೆಂಬಲ ನೋಡಿದರೆ ಭಾರತೀಯ ಜನತಾ ಪಕ್ಷ 18 ವಿಧಾನಸಭಾ ಕ್ಷೇತ್ರಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮತದಾರರಿಗೆ ಕರೆ ನೀಡಿದ ಅಮಿತ್ ಷಾ ತಾವು ವಾಪಸ್ ಹೋದ ಬಳಿಗೆ ಪ್ರತಿಯೊಬ್ಬರು ತಮ್ಮ ಸಂಬಂಧಿಕರು ಸ್ನೇಹಿತರು ಬಂಧುಗಳನ್ನು ಭೇಟಿ ಮಾಡಿ ಕಮಲ ಚಿಹ್ನೆಯ ಪರ ಮತದಾನ ಮಾಡುವಂತೆ ಅವರನ್ನು ಉತ್ತೇಜಿಸಬೇಕು ಎಂದು ಹೇಳಿದರು.
2024ರಲ್ಲಿ ದೇಶ ಮತ್ತೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲಿದೆ ದೇಶದಲ್ಲಿ ಪುನಹ ಬಲಾಢ್ಯ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸ್ಥಾಪಿಸುವತ್ತ ಸನ್ನದ್ಧರಾಗಬೇಕಿದೆ ಎಂದು ಹೇಳಿದರು.
ಸದ್ಯ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ
ಡಾಕ್ಟರ್ ರವಿ ಪಾಟೀಲ್ ಪರ ಮತದಾರರು ಮತ ಚಲಾಯಿಸಿ ಪ್ರಚಂಡ ಬಹುಮತದಿಂದ ಡಾಕ್ಟರ್ ರವಿ ಪಾಟೀಲ್ ಅವರನ್ನು ಆರಿಸಿ ತರಬೇಕು ಎಂದು ವಿನಂತಿಸಿದರು.ಅಭ್ಯರ್ಥಿ ಡಾಕ್ಟರ್ ರವಿ ಪಾಟೀಲ್ ಮಾತನಾಡಿ ಮೇ 10 ರ ಚುನಾವಣೆಯಲ್ಲಿ ಎಲ್ಲರೂ ಭಾಗಿಯಾಗಿ ತಮ್ಮ ಆತ್ಯ ಅಮೂಲ್ಯ ಮತವನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ತಮಗೆ ನೀಡಬೇಕೆಂದು ವಿನಮ್ರವಾಗಿ ವಿನಂತಿಸಿದರು.ಕ್ಷೇತ್ರದ ಜನ ತೋರಿದ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು
ಬೆಳಗಾವಿ ಸಂಸದೆ ಮಂಗಳ ಅಂಗಡಿ ಶಾಸಕ ಅನಿಲ್ ಬೆನಿಕೆ ಉಪಸ್ಥಿತರಿದ್ದರು