This is the title of the web page
This is the title of the web page

ಪಡಿತರ ಚೀಟಿಗಳ ಹಂಚಿಕೆಯಲ್ಲಿ ಅಕ್ರಮ: ಇಬ್ಬರು ಆಹಾರ ನಿರೀಕ್ಷಕರು ಅಮಾನತು..!

ಪಡಿತರ ಚೀಟಿಗಳ ಹಂಚಿಕೆಯಲ್ಲಿ ಅಕ್ರಮ: ಇಬ್ಬರು ಆಹಾರ ನಿರೀಕ್ಷಕರು ಅಮಾನತು..!

 

ಬೆಳಗಾವಿ: ಪಡಿತರ ಚೀಟಿಗಳ ಹಂಚಿಕೆಯಲ್ಲಿ ಅಕ್ರಮ ನಡೆಸಿದ್ದಲ್ಲದೇ , ಅಧಿಕಾರದಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ ಹುಕ್ಕೇರಿ ಇಬ್ಬರು ಆಹಾರ ನಿರೀಕ್ಷಕರು ಅಮಾನತು ಮಾಡಿ ಜಿಲ್ಲಾಧಿಕಾರಿ ನೀತಿಶ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಹುಕ್ಕೇರಿ ಆಹಾರ ನಿರೀಕ್ಷಕ ವೀರಭದ್ರ ಶೇಬನ್ನವರ, ಯಮಕನಮರಡಿ ಆಹಾರ ನಿರೀಕ್ಷಕ ಇರ್ಫಾನ ಉಸ್ತಾದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇವರಿಬ್ಬರು ಅಧಿಕಾರ ದುರುಪಯೋಗ ಮಾಡಿಕೊಂಡು ಅನರ್ಹರಿಗೆ ಪಡಿತರ ಚೀಟಿ ಹಂಚಿಕೆ ಮಾಡಿದ್ದರು. ಮಾದ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಯಮಕನಮರಡಿ ಮತ ಕ್ಷೇತ್ರದ 148 ಪಡಿತರ ಚೀಟಿ ಹಾಗೂ ಹುಕ್ಕೇರಿ ಕ್ಷೇತ್ರದ 24 ಪಡಿತರ ಚೀಟಿಗಳನ್ನು ಅನುಮೋದನೆ ನೀಡಿದ್ದಾರೆ. ವೀರಭದ್ರ ಶೇಬನ್ನವರ ಅವರು ಹುಕ್ಕೇರಿ ಕ್ಷೇತ್ರದ 519 ಪಡಿತರ ಚೀಟಿ ಹಾಗೂ ಯಮಕನಮರಡಿ ಕ್ಷೇತ್ರದ 299 ಪಡಿತರ ಚೀಟಿಗಳನ್ನು ಯಾವುದೇ ದಾಖಲೆಗಳನ್ನು ಅರ್ಜಿದಾರರಿಂದ ಪಡೆಯದೇ, ಸ್ಥಳ ತನಿಖೆ ಮಾಡದೇ, ಅಕ್ರಮವಾಗಿ ಹಣ ಪಡೆದು ಅನುಮೋದನೆ ನೀಡಿರುವದು ಮೇಲ್ನೋಟಕ್ಕೆ ಸಾಬೀತಾಗಿದೆ.
ತಾಲೂಕಿನಲ್ಲಿ ಹೊಸದಾಗಿ ಹಂಚಿಕಯಾದ ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗಳ ಹಂಚಿಕೆಯಲ್ಲಿ ಅಕ್ರಮ ನಡೆಸಿದ್ದಲ್ಲದೇ ಗ್ರಾಮ ಒನ್ ಹಾಗೂ ಖಾಸಗಿ ಸೇವಾ ಕೇಂದ್ರಗಳ ಡೇಟಾ ಎಂಟ್ರಿ ಆಪರೇಟರಗಳ ಮೂಲಕ ಹಣ ಪಡೆದು ಅನರ್ಹರಿಗೆ ರೇಶನ್ ಕಾರ್ಡ್ಗಳನ್ನು ಮಂಜೂರು ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಅಕ್ರಮ ತನಿಖೆಗೆ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡದ ವರದಿ ಆಧರಿಸಿ ಆಹಾರ ನಿರೀಕ್ಷಕರಾದ ವೀರಭದ್ರ ಶೇಬನ್ನವರ, ಇರ್ಫಾನ ಉಸ್ತಾದ ಅವರನ್ನು ಇಲಾಖೆ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.