ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಸೋಮವಾರ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು.
ನ್ಯೂಗಾಂಧಿನರ, ಅಮನಗರ, ರಾಮತೀರ್ಥನಗರದಲ್ಲಿ ತಮ್ಮ ಅಪಾರ ಬೆಂಬಲಿಗರೊಂರಿಗೆ ಮತ ಭೇಟೆ ನಡೆಸಿದ ಟೋಪಣ್ಣವರ ನಗರದ ಅಭಿವೃದ್ಧಿಗಾಗಿ ಈ ಬಾರಿ ಬದಲಾವಣೆ ಮಾಡುವ ಕಾಲ ಸನ್ನಿಹಿತವಾಗಿದೆ. ಉತ್ತರ ಮತಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ರಾಜಕುಮಾರ ಟೋಪಣ್ಣವರ ಪ್ರಚಾರಕ್ಕೆ ಹೋದೆಲ್ಲಡೆ ಮತದಾರರು ಆತ್ಮೀಯವಾಗಿ ಸ್ಪಂದನೆ ನೀಡುತ್ತಿದ್ದಾರೆ. ಸ್ವಯಂಪ್ರದಾಯರಾಗಿ ಮುಂದೆ ಬಂದು ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ತಮ್ಮ ಕುಟುಂಬ ವರ್ಗ, ಅಕ್ಕ ಪಕ್ಕದ ಮನೆಯವರು ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ರವೀಂದ್ರ ಬೆಲ್ಲದ, ಜುನೈದ ಪಾಶಾ, ಶಂಕರ ಹೆಗಡೆ, ಕೈಫ್, ಕೀಜರ್, ಮುಫಿದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.