ಬೆಳಗಾವಿ ನಗರದ ವಿಧವಿಧ ಬಡಾವಣೆಗಳಲ್ಲಿ ಅಬ್ಬರದ ಪ್ರಚಾರ  ನಡೆಸಿದ ಟೋಪಣ್ಣವರ

ಬೆಳಗಾವಿ ನಗರದ ವಿಧವಿಧ ಬಡಾವಣೆಗಳಲ್ಲಿ ಅಬ್ಬರದ ಪ್ರಚಾರ  ನಡೆಸಿದ ಟೋಪಣ್ಣವರ

 

ಬೆಳಗಾವಿ : ಬೆಳಗಾವಿ ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಕ್ಷೇತ್ರದಲ್ಲಿ ಶುಕ್ರವಾರ ಮಿಂಚಿನ ಪ್ರಚಾರ ನಡೆಸಿದರು.

ಹೋರಾಟದ ಮೂಲಕ ಹೆಸರು ಮಾಡಿರುವ ಟೋಪಣ್ಣವರ ಅಧಿಕಾರ ಇಲ್ಲದಿದ್ದರೂ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ.

ಈಗಾಗಲೇ ಕ್ಷೇತ್ರದ ತುಂಬ ಬಿರುಸಿನ ಪ್ರಚಾರ ನಡೆಸಿರುವ ಅವರು, ಒಂದು ಬಾರಿ ಆಪ್ ಗೆ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.