ಬೆಳಗಾವಿಯಲ್ಲಿ ಎರಡು ದಿನಗಳ ಗೋ-ಆಧಾರಿತ
ಉತ್ಪನ್ನಗಳ ಕುರಿತು ಕಾರ್ಯಾಗಾರ ಬೆಳಗಾವಿ, : ಇದೆ ಆಗಸ್ಟ್ 19ಮತ್ತು 20 ಗೌ-ಗಂಗಾ ಗೋಶಾಲಾ ಟ್ರಸ್ಟ್ ಮತ್ತು ಶ್ರೀ ಗುಜರಾತಿ ನವರಾತ್ರ ಉತ್ಸವ ಮಂಡಲ, ಬೆಳಗಾವಿ, ಪಂಚಗವ್ಯ ವೈದ್ಯರ ಸಂಘ ಕರ್ನಾಟಕ, ಮತ್ತು ಗೋಮಾತಾ ಫೌಂಡೇಶನ್, ತಮಿಳುನಾಡು, ಇವರ ಸಹಯೋಗದಲ್ಲಿ ಎರಡು ದಿನಗಳ ಗೋ-ಆಧಾರಿತ ಕಾರ್ಯಕ್ರಮವನ್ನು ಬೆಳಗಾವಿಯ ರೈತರಿಗೆ ಮತ್ತು ನಗರವಾಸಿಗಳಿಗಾಗಿ ಆಯೋಜಿಸಲಾಗಿದೆ.
ಪ್ರಸ್ತುತದ ಸಮಯದಲ್ಲಿ,ಕುಟುಂಬಗಳಲ್ಲಿ ಪತಿ, ಪತ್ನಿ, ಮಕ್ಕಳು ಅಥವಾ ಇಡೀ ಕುಟುಂಬವಾಗಿರಬಹುದು, ಎಲ್ಲರೂ ಹಲವಾರು ಆರೋಗ್ಯ ಮತ್ತು ಒತ್ತಡದ ಸಮಸ್ಯೆಗಳಲ್ಲಿದ್ದಾರೆ. ತಂತ್ರಜ್ಞಾನದ ಪ್ರಗತಿಯ ಹೊರತಾಗಿಯೂ, ಹೊಸ ಸವಾಲುಗಳು ಏರಿಕೆಯ ಕ್ರಮದಲ್ಲಿವೆ. ಈ ಎರಡು ದಿನಗಳ ಸತ್ರದಲ್ಲಿ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ರೈತರಿಗೆ ಈ ಕಾರ್ಯಕ್ರಮ ಅನೇಕವರದಾನಗಳನ್ನು ನೀಡುವ ಉದ್ದೇಶದೊಂದಿಗೆ ಆಯೋಜಿಸಲಾಗಿದೆ.
19 ಮತ್ತು ೨೦ ಆಗಸ್ಟ್‌ನ ಕಾರ್ಯಕ್ರಮವು ಗೋ-ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಪ್ರತ್ಯಕ್ಷಿಕೆಯಅವಧಿಯ ಮೂಲಕ ಪ್ರಾರಂಭವಾಗುತ್ತದೆ. ತುಕಾರಾಂ ಪವಾರ್, ಡಾ.ಜೀವನ್, ತದನಂತರ ಇಸ್ಕಾನ್ ದೇವಸ್ಥಾನದ ಪರಮ ಪೂಜ್ಯ ಶ್ರದ್ಧೆಯ ಭಕ್ತಿರಸಾಮೃತ್ ಜಿ ಮಹಾರಾಜ್, ಮತ್ತು ಸಂಜೆ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಆಶೀರ್ವಚನ ಜರುಗಲಿದೆ, ಜೊತೆಗೆ ಶ್ರೀ ನಿರಂಜನ್ ವರ್ಮಾ ಗುರೂಜಿ ಅವರು ಅನೇಕ ಗೋ-ಪಾಲಕರನ್ನು ಕುರಿತು ಮಾರ್ಗದರ್ಶನ ಸಹ ಮಾಡಲಿದ್ದಾರೆ.
ಈ ಎರಡು ದಿನ, ಗುಜರಾತ್ ಭವನದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನಿನ ಸಮಸ್ಯೆಗಳು, ಸಿಯಾಟಿಕಾ ಮತ್ತು ಕರ್ಕರೋಗ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸಾ ಮತ್ತು ಉಪಚಾರ ಅವಧಿಗಳನ್ನು ಏರ್ಪಡಿಸಿದೆ. ಬೆಳಗಾವಿಯ ನಾಗರಿಕರು ಈ ಚಿಕಿತ್ಸೆಗಳಿಗಾಗಿ ತಾವು ನೋಂದಾಯಿಸಿಕೊಳ್ಳುವಂತೆಶ್ರೀ. ವಿಕಾಸ್ ಪವಾರ್ +91 99026 76980 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಈ ೨ ದಿನಗಳ ಕಾರ್ಯಕ್ರಮವನ್ನು ಆಶೀರ್ವದಿಸಲು ಬೆಳಗಾವಿಯ ಇಸ್ಕಾನ್ ಸಂಸ್ಥೆಯ ಪ್ರಧಾನರು ಪರಮಪೂಜ್ಯ ಶ್ರೀ ಭಕ್ತಿರಸಾಮೃತ ಸ್ವಾಮಿಮಹಾರಾಜರು, ಜೊತೆಗೆನಿಡಸೋಸಿಯ ಪರಮ ಪೂಜ್ಯ ನಿಜಲಿಂಗೇಶ್ವರ ಸ್ವಾಮಿಗಳು (ಉತ್ತರಾಧಿಕಾರಿಗಳು), ವಾಸನ್‌ನ ಪ್ರತಿಷ್ಠಿತ ಸಂಜೀವಿನಿ ವೈದ್ಯರಾದ ಹಣಮಂತ ಮಳಲಿ, ಕ್ಯಾನ್ಸರ್ ತಜ್ಞರು, ಜೊತೆಗೆ ದಿ. ಶ್ರೀರಾಜೀವ ದಿಕ್ಷಿತರ ವಿಚಾರಧಾರೆಗಳನ್ನು ಉಣಬಡಿಸಲು ತಮಿಳುನಾಡಿನ ಪ್ರಖ್ಯಾತ ವನಸ್ಪತಿ ಆಚಾರ್ಯರಾದ ಶ್ರೀ ನಿರಂಜನ್ವರ್ಮಾ, ಸಿದ್ಧಾಚಾರ್ಯರು ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.