ಬೆಳಗಾವಿ: ಅಧಿಕಾರಕ್ಕೆರಲು ರಾಜ್ಯರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷ ಮೇಲಿಂದ ಮೇಲೆ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಮತದಾರರು ಯಾವ ಪಕ್ಷಕ್ಕೆ ಮಣೆ ಹಾಕುತ್ತಾರೆ ಎಂಬುವುದು ಯಕ್ಷಪ್ರಶ್ನೆಯಾಗಿದೆ. ಮೇ 10 ರಂದು ಅಭ್ಯರ್ಥಿಗಳ ಹಣೆಬರಹ ಮತದಾರರ ಬರೆಯಲಿದ್ದಾರೆ.
ಯಾರು ನಾಡ ದೊರೆ: ಚುನಾವಣೆ ಕಾವು ರಾಜಧಾನಿ ಬಿಟ್ಟರೆ ಬೆಳಗಾವಿಯಿಂದ ರಾಜ್ಯಕ್ಕೆ ಬಿಸಿಗಾಳಿಗೆ ಚಿಂತೆ ಸರ್ಕಾರ ರಚನೆ ಮಾಡಲು ಬೆಳಗಾವಿಯಿಂದ ಅಭ್ಯರ್ಥಿಗಳ ಆಯ್ಕೆ ಮೇಲೆ ನಿಂತಿದೆ. 18 ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಿಂದ ಎಷ್ಟು ಅಭ್ಯರ್ಥಿಗಳು ಯಾವ ಪಕ್ಷ ಆಯ್ಕೆಯಾಗುತ್ತಾರೆ ಅದರೆ, ನಾಡ ದೊರೆ ಭವಿಷ್ಯ ನಿರ್ಧಾರವಾಗಲಿದೆ.
ಬೆಂಗಳೂರು ನಗರದ ಬಳಿಕ, ಬೆಳಗಾವಿ ಜಿಲ್ಲೆ ಇನ್ನು ನಾಲ್ಕು ದಿನಕ್ಕೆ ಮತದಾನ ನಡೆಯಲಿದ್ದು, ದಶದಿಕ್ಕಿನಲ್ಲಿ ಪ್ರಚಾರ ಅಬ್ಬರ ಜೋರಾಗಿದೆ. ಮತದಾರರ ಯಾವ ಪಕ್ಷಕ್ಕೆ ಮಣೆ ಹಾಕುತ್ತಾರೆ ನೋಡಬೇಕಿದೆ.
ಬಿಜೆಪಿ ಮೇಲೆ ಭ್ರಷ್ಟಚಾರ ಆರೋಪ ಕಾಂಗ್ರೆಸ್ ಜೆಡಿಎಸ್ ಆರೋಪ ಮಾಡ್ತಾ ಬಂದಿದೆ:
ಅಧಿಕಾರಕ್ಕೆ ಏರಿದ ಎರಡು ವರ್ಷದಲ್ಲಿ ಬಿಜೆಪಿ ಮೇಲೆ ವಿರೋದ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಭ್ರಷ್ಟಚಾರ ಆರೋಪ ಗೊಬೆ ಕೂರಿಸಿವೆ. ಹೀಗಾಗಿ ಎಲ್ಲವನ್ನು ಮೆಟ್ಟಿ ನಿಂತು ಬಿಜೆಪಿ ಗೆಲುವಾ ಅಥವಾ ಕೈ ಗೆ ಮಣೆನಾ ನೋಡಬೇಕಿದೆ.
ರಾಜ್ಯದ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮರಾಠರು ಪ್ರಾಬಲ್ಯ ಹೊಂದಿದ್ದರೆ, ಉಳಿದ 13 ಕಡೆಗಳಲ್ಲಿ ಲಿಂಗಾಯತರು ಬಹುಮತ ಹೊಂದಿದ್ದಾರೆ. ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಕುಂದಾನಗರಿಯಲ್ಲಿ ಯಾವ ಪಕ್ಷ ಬಹುಮತ ಸಾಧಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮತದಾರರ ವಿವರ:
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 39.01 ಲಕ್ಷ ಮತದಾರರಿದ್ದಾರೆ. ಇವರಲ್ಲಿ 19,68,928 ಪುರುಷ ಮತದಾರರು, 19,32,576 ಮಹಿಳೆಯರು ಮತ್ತು 141 ಇತರೆ ಮತದಾರರು ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ರಾಜಕೀಯ ಚಿತ್ರಣ: ಮೈತ್ರಿ ಸರ್ಕಾ ಉರುಳಿಸಿದ ಪ್ರಬಲ ನಾಯಕ ರಮೇಶ ಜಾರಕಿಹೊಳಿ ಈಗ್ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಹವಣಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಕಮಲ ಅತಂತ್ರ ನಡುವೆ ದಶದಿಕ್ಕಿನಲ್ಲಿ ಬಿಜೆಪಿ ಪ್ರಚಾರ ಮಾಡುತ್ತಿದ್ದಾರೆ. ಇತ ಲಕ್ಷ್ಮ ಸವದಿ ಅವರು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ರಣತಂತ್ರ ರೂಪಿಸಿದೆ- ಯಾವ ಕ್ಷೇತ್ರದ ತಿರುಗುಬಾನ ಆಗುತ್ತದೆ ಎಂಬುವುದೇ ರೋಚಕ.
ಲಿಂಗಾಯತ ಮತದಾರರೇ ನಿರ್ಣಾಯಕರು: ಲಿಂಗಾಯತ ಸಮುದಾಯದ ಘಟಾನುಘಟಿ ನಾಯಕ ಬಿ.ಎಸ್.ವೈ ಚುನಾವಣಾ ರಾಜಕೀಯದಿಂದ ಹಿಂದೆ, ಸರಿದಿರುವುದು, ಸ್ಥಳೀಯ ಪ್ರಮುಖ ಲಿಂಗಾಯತ ಬಿಜೆಪಿ ನಾಯಕರಾದ ಸುರೇಶ್ ಅಂಗಡಿ ಮತ್ತು ಉಮೇಶ್ ಕತ್ತಿ ಅವರ ನಿಧನ, ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜಕೀಯವಾಗಿ ಪ್ರಭಾವಿ ಜಾರಕಿಹೊಳಿ ಕುಟುಂಬದ ವರ್ಚಸ್ಸು ಈ ಎಲ್ಲಾ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಅಂಶಗಳಾಗಲಿವೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಮೂರು ಬಾರಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಸೇರಿದಂತೆ ಹಲವು ಅತೃಪ್ತ ಬಿಜೆಪಿ ನಾಯಕರು ಬೆಳಗಾವಿಯಿಂದ ಹೊರಗುಳಿದಿರುವುದು ಈ ಕ್ಷೇತ್ರಕ್ಕೆ ಬಿಜೆಪಿ ಮತ ಗಳಿಕೆಗೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಕಮಲ ಪಾಳಯದಲ್ಲಿ ತಳಮಳ ಶುರುವಾಗಿದೆ.
ಲಿಂಗಾಯತ ನಾಯಕರಾದ ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಗೆಳಗಿಸಿರುವ ಸಿಟ್ಟು ಆ ಲಿಂಗಾಯತ ಸಮುದಾಯದ ಜನರಲ್ಲಿ ಮನೆ ಮಾಡಿದೆ. ಒಂದೇ ಈ ಭಾರೀ ಚುನಾವಣೆಯಲ್ಲಿ ಕಾಂಗ್ರೆಸ್ ಭರವಸೆ ಹಾಗೂ ಲಿಂಗಾಯತ ಮತಗಳು ವಾಲಿದರೆ- ಕೊನೆಯ ಹಂತದಲ್ಲಿ ಬಿಜೆಪಿಗೆ ನುಂಗಲಾದ ತುತ್ತಾಗಲಿದೆ.