ವಿದ್ಯಾರ್ಥಿನಿ ಚೈತನ್ಯಾ ವೀರಭದ್ರಯ್ಯ ಕಗ್ಗಣಗಿಮಠ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೧ ರಷ್ಟು ಅಂಕಪಡೆಯುವ ಮೂಲಕ ಉತ್ತಮ ಸಾಧನೆ

ವಿದ್ಯಾರ್ಥಿನಿ ಚೈತನ್ಯಾ ವೀರಭದ್ರಯ್ಯ ಕಗ್ಗಣಗಿಮಠ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೧ ರಷ್ಟು ಅಂಕಪಡೆಯುವ ಮೂಲಕ ಉತ್ತಮ ಸಾಧನೆ

ಬೆಳಗಾವಿ : ಸವದತ್ತಿ ತಾಲೂಕಿನ ಮರಕುಂಬಿಯ ಗಣಾಚಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಚೈತನ್ಯಾ ವೀರಭದ್ರಯ್ಯ ಕಗ್ಗಣಗಿಮಠ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೧ ರಷ್ಟು ಅಂಕಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ವಿದ್ಯಾರ್ಥಿನಿ ಚೈತನ್ಯಾ ಕನ್ನಡದ ವಿಷಯದಲ್ಲಿ ೧೧೬, ಇಂಗ್ಲೀಷ-೯೬, ಹಿಂದಿ-೮೩, ಗಣಿತ-೯೫, ವಿಜ್ಞಾನ – ೭೯ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ೯೮ ಸೇರಿದಂತೆ ಒಟ್ಟು ೫೬೭ (ಶೇ.೯೧ರಷ್ಟು ) ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ. ತಂದೆ ವಿರಭದ್ರಯ್ಯ ಅವರು ಕೂಲಿ ಕಾರ್ಮಿಕನಾಗಿದ್ದು, ತಾಯಿ ವೀಣಾ ಕಗ್ಗಣಗಿಮಠ ಗೃಹಣಿಯಾಗಿದ್ದಾಳೆ. ತಂದೆಯ ಶ್ರಮವನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ಚೈತನ್ಯಾ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಈ ಚೈತನ್ಯಾಳ ಸಾಧನೆಯನ್ನು ಶಾಲೆಯ ಶಿಕ್ಷಕ ವರ್ಗ, ಪಾಲಕರು, ಪೋಷಕರು, ಸ್ನೇಹಿತರು ಹಾಗೂ ಸಂಬಂಧಿಕರು ಶ್ಲಾಘಿಸಿದ್ದಾರೆ.