This is the title of the web page
This is the title of the web page

ಹಿರಿಯ ನಾಗರಿಕರ ಹಿತರಕ್ಷಣೆಗೆ ಸಮಾಜ ಬದ್ದವಾಗಿರಬೇಕು; ಇಳಿವಯಸ್ಸಿನಲ್ಲಿ ಆರ್ಥಿಕತೆ, ಆರೋಗ್ಯ ಕಾಪಾಡಿಕೊಳ್ಳಲು ಸರಕಾರ ನೆರವಾಗಬೇಕು: ನಿವೃತ್ತ ಶಿಕ್ಷಕ ಶಿವಮೂರ್ತಯ್ಯ ಹಿರೇಮಠ*

ಹಿರಿಯ ನಾಗರಿಕರ ಹಿತರಕ್ಷಣೆಗೆ ಸಮಾಜ ಬದ್ದವಾಗಿರಬೇಕು; ಇಳಿವಯಸ್ಸಿನಲ್ಲಿ ಆರ್ಥಿಕತೆ, ಆರೋಗ್ಯ ಕಾಪಾಡಿಕೊಳ್ಳಲು ಸರಕಾರ ನೆರವಾಗಬೇಕು: ನಿವೃತ್ತ ಶಿಕ್ಷಕ ಶಿವಮೂರ್ತಯ್ಯ ಹಿರೇಮಠ*

ಧಾರವಾಡ, ಅಕ್ಟೋಬರ್ 01:* ಇಡೀ ಜೀವನವನ್ನು ಕುಟುಂಬ ರಕ್ಷಣೆ, ಸರಕಾರ, ಸಾಮಾಜಿಕ ಸೇವೆಯಲ್ಲಿ ಕಳೆಯುವ ಹಿರಿಯ ನಾಗರಿಕರ ಹಿತರಕ್ಷಣೆಗೆ ಸಮಾಜ ಬದ್ದವಾಗಿದ್ದು, ಹಿರಿಯರನ್ನು ಗೌರವಯುತವಾಗಿ ನೋಡಬೇಕು. ವಯೋವೃದ್ದರಿಗೆ ಸರಕಾರವು ಕಲ್ಪಸಿರುವ ಉತ್ತಮ ಚಿಕಿತ್ಸೆ, ಔಷಧಿ, ಆರ್ಥಿಕ ಸಹಾಯದ ಯೋಜನೆಗಳನ್ನು ಹೆಚ್ಚಿಸಬೇಕು ಎಂದು ಧಾರವಾಡ ಕೇಂದ್ರ ಕಾರಾಗೃಹದ ಬಾಲ ಅಪರಾಧಿಗಳ ಶಾಲೆಯ ನಿವೃತ್ತ ಶಿಕ್ಷಕ, 87 ವರ್ಷ ವಯಸ್ಸಿನ ಹಿರಿಯ ನಾಗರಿಕ ಶಿವಮೂರ್ತಯ್ಯ ಜೆ.ಹಿರೇಮಠ ಹೇಳಿದರು.

ಅವರು ಇಂದು ( ಅ.01) ಬೆಳಿಗ್ಗೆ ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಜಿ.ಜಿ.ಹಿರೇಮಠ ಅವರ ಸತ್ಯಕುಂಜ ನಿವಾಸದ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಂಸ್ಥಾಪಕ ಹಿರಿಯ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ, ಮಾತನಾಡಿದರು.

ಜೀವನ ಪೂರ್ತಿ ದುಡಿದು, ನಿವೃತ್ತರಾಗುವ ನಾಗರಿಕರಿಗೆ ಇಳಿವಯಸ್ಸಿನಲ್ಲಿ ಸಾಮಾಜಿಕ ಬೆಂಬಲ, ನೈತಿಕ ಸ್ಪಂದನೆ ಮತ್ತು ಗೌರವಯುತವಾಗಿ ನಡೆಸಿಕೊಳ್ಳುವ ಜನಬೇಕು. ಆ ಸಂಸ್ಕಾರ, ಸಂಸ್ಕೃತಿ ನಮ್ಮ ದೇಶದಲ್ಲಿ ಇರುವದರಿಂದ ವ್ಯಕ್ತಿ ನೂರು ವರ್ಷ ಕಖೆದರೂ ಮತ್ತೇ ಉಳಿಸಿಕೊಳ್ಳಬೇಕೆಂದು ಹಂಬಲಿಸಿ, ಕಷ್ಟಪಡುತ್ತಾರೆ. ಇದಕ್ಕೆ ಸರಕಾರವು ಇನ್ನಷ್ಟು ನೆರವಿನ ಯೋಜನೆಗಳನ್ನು ನೀಡಬೇಕೆಂದು ಅವರು ತಿಳಿಸಿದರು.

ಇಂದು ಸರಕಾರಿ ನೌಕರರಿಗೆ ಕರಾಳ ರೂಪವಾಗಿರುವ ನೂತನ ಪಿಂಚಣಿ ಎನ್.ಪಿಎಸ್ ಯೋಜನೆ ರದ್ದಾಗಬೇಕು. ಎಲ್ಲ ನೌಕರರಿಗೂ ಹಳೆ ಪಿಂಚಣಿ ಯೋಜನೆ ಮರು ಜಾರಿ ಆಗಬೇಕು. ಇಂದು ನಮ್ಮಂತ 80,90 100 ವಯಸ್ಸು ದಾಟಿದ ಕೊಟ್ಯಾಂತರ ನಿವೃತ್ತರಿಗೆ ಹಳೆ ಪಿಂಚಣಿ ಇರುವದರಿಂದ ಅನೇಕ ಕುಟುಂಬಗಳು ಉತ್ತಮವಾಗಿ ಆರೈಕೆ ಮಾಡುತ್ತಿವೆ. ಹಣವೇ ಮುಖ್ಯವೆಂದು ಭಾವಿಸಿದ ಅನೇಕ ಜನರು ನೌಕರ ಅನಾಥನಾಗಿದ್ದರೂ ಅವರ ಪೆನಶ್ಯನ್ ಆಸೆಗಾಗಿ ಉತ್ತಮವಾಗಿ ಸಾಕುತ್ತಾರೆ. ಆದ್ದರಿಂದ ವಯೋವೃದ್ದರ ರಕ್ಷಣೆಗೆ ಹೆಚ್ಚು ಭದ್ರತಾ ಯೋಜನೆಗಳನ್ನು ಮತ್ತು ಮುಖ್ಯವಾಗಿ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ವೀರಶೈವ ಜಂಗಮ ಸಂಸ್ಥೆ ಅನೇಕ ಸಾಮಾಜಿಕ, ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದೆ. ಅವರ ಸೇವೆ ಅಬಾಧಿತವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಇನ್ನೊರ್ವ 95 ವಯಸ್ಸಿನ ಹಿರಿಯ ಸದಸ್ಯ ಜಿ.ಜಿ.ಹಿರೇಮಠ ಅವರು ಮಾತನಾಡಿ, ಹಿರಿಯ ನಾಗರಿಕರು ಎಂದು ಗುರುತಿಸಿ, ನಮ್ಮ ಮನೆಯವರೆಗೆ ಬಂದು ಗೌರವಿಸುವ ಸಂಸ್ಕೃತಿ, ಸಂಸ್ಕಾರವೇ ಭಾರತೀಯರ ವಿಶೇಷತೆ ಆಗಿದೆ. ಮತ್ತು ಇಂತ ಕೌಟಂಬಿಕ ಸಾಮರಸ್ಯದ ಮೌಲ್ಯಗಳನ್ನು ನಮ್ಮಸಮಾಜ ಜಗತ್ತಿಗೆ ಎತ್ತಿ ತೋರಿಸಿದೆ. ವಯೋಸಹಜ ಖಾಯಿಲೆಯಿಂದ ಹಾಸಿಗೆ ಹಿಡಿದರೂ ಬಿಡದೆ, ತಮ್ಮ ಮಕ್ಕಳಂತೆ ಜೋಪಾನ ಮಾಡುವ ಹೃದಯವಂತಿಕೆ ಭಾರತೀಯರಲ್ಲಿ ಮಾತ್ರ ಇದೆ ಎಂದರು.

ನಾವು ನಮ್ಮ ತಂದೆತಾಯಿಗಳನ್ನು ಜೋಪಾನ ಮಾಡಿದಂತೆ ನಮ್ಮ ಮಕ್ಕಳು, ಬಂಧುಗಳು ನಮ್ಮನ್ನು ಇಷ್ಟು ಇಳಿವಯಸ್ಸಿನಲ್ಲೂ ಸಣ್ಣ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ. ಇದಕ್ಕಾಗಿ ಆದರೂ ನಾವು ಭರತ ಭೂಮಿಗೆ, ಕುಟುಂಬ ಸದಸ್ಯರಿಗೆ ಋಣಿ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಎಸಿಪಿ ಜಿ.ಆರ್.ಹಿರೇಮಠ, ಕೃಷಿ ಇಲಾಖೆ ನಿವೃತ್ತ ಅಧಿಕಾರಿಗಳಾದ ಮೃತ್ಯುಂಜಯ ಎಸ್. ಕೋರಿಮಠ, ಸಿ.ಎಸ್.ವಿರಕ್ತಮಠ, ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಗದೀಶ ಕಾಡದೇವರಮಠ, ಎಸ್.ಎಸ್.ಹಿರೇಮಠ, ಸಹ ಶಿಕ್ಷಕಿಯರಾದ ಸುಮಿತಾ ಹಿರೇಮಠ, ದ್ರಾಕ್ಷಾಯಿಣಿ ಹಿರೇಮಠ ಸೇರಿದಂತೆ ಜಂಗಮ ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಸುರೇಶ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರಭು ಕೆಂಡದಮಠ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಪಂಚಾಕ್ಷರಯ್ಯ ಹಿರೇಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ತಹಸಿಲ್ದಾರ ವಿ.ಎಚ್.ಕಲ್ಮಠ, ನಿವೃತ್ತ ಕೃಷಿ ಅಧಿಕಾರಿ ಎಂ.ಕೆ.ಹಿರೇಮಠ, ವೀಣಾ ಕಲ್ಮಠ, ಶ್ವೇತಾ ಪ್ರವೀಣ ಕಲ್ಮಠ, ರತ್ನಾ ಬಸವರಾಜ ಕುಲಕರ್ಣಿ, ಭಾರತಿ ಮಹೇಶ ಹಿರೇಮಠ, ಸುಶ್ಮಿತಾ ಉಮೇಶ ಹಿರೇಮಠ, ಶ್ವೇತಾ ವಿಶ್ವನಾಥ ಹಿರೇಮಠ, ನಿರ್ಮಲಾ ಮಂಜೇಶ್ವರ ತೆಗ್ಗಿನಮಠ, ಸುವರ್ಣಾ ಸುರೇಶ ತಾಳಿಕೋಟಿ ಹಾಗೂ ಸನ್ಮಾನಿತರ ಕುಟುಂಬ ಸದಸ್ಯರು ಸೇರಿದಂತೆ ಇತರರು ಇದ್ದರು.
********