This is the title of the web page
This is the title of the web page

ಶರಣರ ದಾಸೋಹ ತತ್ವ ಸಾರ್ವಕಾಲಿಕ ಶ್ರೇಷ್ಠ ತತ್ವ: ಗುರುಸಿದ್ಧ ಸ್ವಾಮೀಜಿ

ಶರಣರ ದಾಸೋಹ ತತ್ವ ಸಾರ್ವಕಾಲಿಕ ಶ್ರೇಷ್ಠ ತತ್ವ: ಗುರುಸಿದ್ಧ ಸ್ವಾಮೀಜಿ

 

ಬೆಳಗಾವಿ: ಬಸವಾದಿ ಶರಣರು ಕಟ್ಟ ಬಯಸಿದ ಹೊಸ ಸಮಾಜದಲ್ಲಿ ಕಾಯಕ ಮತ್ತು ದಾಸೋಹ ತತ್ವಗಳ ಪರಿಕಲ್ಪನೆ ವಿನೂತನ ಪ್ರಯೋಗವಾಗಿದೆ ಎಂದು ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಸ್ವಾಮಿಗಳು ಹೇಳಿದರು.

ಬೆಳಗಾವಿ ಕಾರಂಜಿಮಠದಲ್ಲಿ ದಿನಾಂಕ 1 ಜನೆವರಿ ೨೦೨೪ರಂದು ಜರುಗಿದ ೨೭೦ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೆಲಸ ಮತ್ತು ದಾನ ಎಂಬ ಪರಿಕಲ್ಪನೆಗಳನ್ನು ಅಪವರ್ಗೀಕರಣ ಮಾಡಿ ಕಾಯಕ ಮತ್ತು ದಾಸೋಹ ಎಂಬ ತತ್ವಗಳನ್ನು ಅನುಷ್ಠಾನಕ್ಕೆ ತಂದರು ಎಂದು ಹೇಳಿದರು.

ಪ್ರಾಧ್ಯಾಪಕ ಎಸ್. ಆರ್. ಕಲಹಾಳ ಅವರು ಶರಣರ ದಾಸೋಹ ಪರಿಕಲ್ಪನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಆತ್ಮೋದ್ಧಾರ, ಸಮ ಸಮಾಜ, ಕಾಯಕ ಮತ್ತು ದಾಸೋಹ ಈ ನಾಲ್ಕು ಮೂಲ ತತ್ವಗಳ ಮೇಲೆ ಶರಣ ಧರ್ಮ ಅಸ್ತಿತ್ವಕ್ಕೆ ಬಂದಿತು. ಕಾಲಘಟ್ಟದ ಒತ್ತಡ ಪರಿಣಾಮವಾಗಿ ಕಾಯಕ ಮತ್ತು ದಾಸೋಹ ತತ್ವಗಳು ಜಾರಿಗೆ ಬಂದವು ಎಂದು ಉಪನ್ಯಾಸದಲ್ಲಿ ತಿಳಿಸಿದರು. ಪ್ರಾಚಾರ್ಯ ಪ್ರೊ. ನಿರ್ಮಲಾ ಬಟ್ಟಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಶಿಕ್ಷಕಿ ಶ್ರೀಮತಿ ಸುಮಿತಾ ಮಿಟಗಾರ ಅವರನ್ನು ಪೂಜ್ಯರು ಸನ್ಮಾನಿಸಿದರು. ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಸ್ವಾಗತಿಸಿದರು. ಪ್ರೊ. ಎ.ಕೆ.ಪಾಟೀಲ ನಿರೂಪಿಸಿದರು. ಶ್ರೀ ವಿ.ಕೆ.ಪಾಟೀಲ ವಂದಿಸಿದರು. ಕಾರಂಜಿಮಠದ ಸಂಗೀತ ಶಾಲೆಯ ಮಕ್ಕಳು ವಚನ ಪ್ರಾರ್ಥನೆ ಸಲ್ಲಿಸಿದರು.