ಯಮಕನಮರಡಿ : ಸಮೀಪದ ಹಿಡಕಲ್ ಡ್ಯಾಮಿನ ಸರ್. ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಬುಧವಾರ ದಿ. ೩೧ ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸಾವಿತ್ರಿಭಾಯಿ ಪುಲೆ ಭಾವಚಿತ್ರಕ್ಕೆ ಪೂಜೆ ನೆರವೇರಿಸುವದರ ಮೂಲಕ ಚಾಲನೆ ನೀಡಲಾಯಿತು. ಮಕ್ಕಳಿಗೆ ಗುಲಾಬಿ ಹೂ ನೀಡುವದರ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿ ಸಹಿ ಹಂಚಲಾಯಿತು. ಶಾಲಾ ಮುಖ್ಯಾಧ್ಯಾಪಕ ಉದಯಕುಮಾರ ಕಮ್ಮಾರ ಮಾತನಾಡಿ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಉತ್ತಮ ಗುಣಾತ್ಮಕ ಶೈಕ್ಷಣಿಕ ವರ್ಷವೆಂದು ಆಚರಿಸಲಾಗುತ್ತಿದೆ. ಇತ್ತೀಚೆಗೆ ಜರುಗಿದ ಎಸ್.ಎಸ.ಎಲ್.ಸಿ ಪರೀಕ್ಷೆಯ ಉತ್ತಮ ಫಲಿತಾಂಶ ಬರಲು ಶಿಕ್ಷಣ ಅಧಿಕಾರಿಗಳು ಹುಕ್ಕೇರಿ ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರು ವಿಶೇಷವಾಗಿ ಶ್ರಮಿಸಿದ್ದು ಶ್ಲಾಘನೀವಾದದು.
ಮಕ್ಕಳ ಪ್ರಗತಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಲು ಎಲ್ಲ ಶಿಕ್ಷಕರು ಶ್ರಮಿಸಬೇಕು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದರೊಂದಿಗೆ ಕ್ರೀಡಾ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿ ಶಾಲೆಯಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚು ಮಾಡಿ ಉತ್ತಮ ಶಿಕ್ಷಣ ನೀಡಬೇಕೆಂದು ಹೇಳಿದರು.
ಹಿರಿಯ ಸಾಹಿತಿ ಕಾ.ಹೂ. ಶಿಂಧೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೊಸಪೇಟ ಗ್ರಾ.ಪಂ. ಸದಸ್ಯ ಸದಾನಂದ ಮಾಳ್ಯಾಗೊಳ ಆಗಮಿಸಿ ವಿದ್ಯಾರ್ಥಿಗಳಿಗೆ ಈ ವರ್ಷದ ಶೈಕ್ಷಣಿಕ ವರ್ಷವು ಉತ್ತಮವಾಗಲೆಂದು ಹಾರೈಸಿದರು. ಈ ವೇಳೆಯಲ್ಲಿ ಶಿಕ್ಷಕಿಯಾದ ಎಸ್.ಆಯ್. ಮುಲ್ಲಾ ಮತ್ತು ಶಿಕ್ಷಕರಾದ ಜೆ.ಎಸ್.ಪಾಟೀಲ, ಬಿ.ಎಸ್. ನಾಗನೂರು, ಎಸ್.ಆರ್. ಕುಂದರಗಿ, ಎಸ್.ಆಯ್. ಕಾಂಬಳೆ, ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳು ಹಾಗೂ ಅಕ್ಷರ ದಾಸೋಹ ಸಿಬ್ಬಂದಿವರ್ಗದವರು ಹಾಜರಿದ್ದರು.
ಬಸ್ಸಾಪೂರದಲ್ಲಿ ಶಾಲಾ ಪ್ರಾರಂಭೋತ್ಸವ
ಯಮಕನಮರಡಿ :ಹುಕ್ಕೇರಿ ತಾಲೂಕಿನ ಬಸಾಪೂರ ಕ್ಲಸ್ಟರ ನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಹೊಸಬಸಾಪೂರ ಇಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ನಿಮಿತ್ಯ ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಸ್ವಾಗತಿಸಲಾಯಿತು.ಇದೆ ಸಂದರ್ಭದಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು,ಮಕ್ಕಳಿಗೆ ಹಾಲು ಸಿಹಿ ಭೋಜನ ನೀಡಲಾಯಿತು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಪದಾಧಿಕಾರಿಗಳು,ಪಾಲಕರು,ಶಿಕ್ಷಕರಾದ ರಾಜು ತಳವಾರ,ಚಂದ್ರಾನಾಯ್ಕ ಸಿ ಎಸ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.