ಬೆಳಗಾವಿ: ಅಥಣಿ ಕ್ಷೇತ್ರ ಬಿಟ್ಟು ಕೊಡುವ ಮಾತೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೈಕಮಾಂಡ್ ಬ್ರೇಕ್ ನೀಡಿದೆ.
ರಮೇಶ ಹಾಗೂ ಲಕ್ಷ್ಮಣ ಅಥಣಿ ಕ್ಷೇತ್ರದ ಟಿಕೆಟ್ ಪೈಟ್ ಹೈಕಮಾಂಡ್ ಅಂಗಳವರೆಗೂ ಹೋಗಿದ್ದು, ಸವದಿ ಸಭೆ ಹಾಗೂ ಕಾರ್ಯಕ್ರಮಗಳಿಗೆ ತಡೆ ನೀಡಿದೆ.
ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ಮಹೇಶ ಕುಮ್ಮಟ್ಟಳಿಗೆ ಟಿಕೆಟ್ ಕೊಡಿಸಬೇಕೆಂದು ಪಟ್ಟ ಹಿಡಿದ್ದಾರೆ. ಇದರಿಂದ ಅಥಣಿ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಸವದಿ ಅವರು ಅಥಣಿ ಕ್ಷೇತ್ರದಿಂದ ನಾನೆ ಕಣಕ್ಕೆ ಇಳಿಯಲಾಗುವುದು ಹೇಳಿಕೆ ನೀಡುತ್ತಿದ್ದರು. ಲಕ್ಷ್ಮಣ ಸವದಿ ಸಹ ಅಥಣಿ ಟಿಕೆಟ್ಗೆ ಕಸರತ್ತು ನಡೆಸಿದ್ದಾರೆ. ವಿವಿಧ ಸಮುದಾಯಗಳ ಸಭೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿಗೆ ಠಕ್ಕರ್ ಕೊಡಲು ಮುಂದಾಗಿದ್ದ ಸವದಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಬಿಜೆಪಿ ಹೈಕಮಾಂಡ್, ಲಕ್ಷ್ಮಣ ಸವದಿಗೆ ದೂರವಾಣಿ ಕರೆ ಮಾಡಿ ಯಾವುದೇ ಸಮುದಾಯದ ಸಭೆ ಮಾಡದಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಹೈಕಮಾಂಡ್ ಮೂಲಕ ಸವದಿಗೆ ಚೆಕ್ ಮೆಟ್ ಕೊಟ್ರಾ ಎನ್ನುವ ಚರ್ಚೆಗಳು ಶುರುವಾಗಿವೆ.