ಬೆಳಗಾವಿ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ಲಾಸ್ಟಿಕ್ ರಸ್ತೆ ಕಾಮಗಾರಿಗೆ ಪೌರಾಡಳಿತ ಸಚಿವ ರಹೀಂಖಾನ ಹಾಗೂ ಸಚಿವ ಸತೀಶ ಜಾರಕಿಹೊಳಿಯವರು ಚಾಲನೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಯಿಂದ ರಾಜ್ಯದಲ್ಲಿ ಪ್ರಥಮ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆ ಮಾಡಿಕೊಂಡು ನಗರದ ಪರಿಸರವನ್ನೂ ರಕ್ಷಿಸುವ ಉದ್ದೇಶದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೌಡರ್ ಆಗಿ ಪರಿವರ್ತಿಸಿ ಪ್ಲಾಸ್ಟಿಕ್ ರಸ್ತೆ ಯಾಗಿ ಡಾಂಬರೀಕರಣ ಕಾಮಗಾರಿಗೆ ಸಚಿವ ರಹೀಂ ಖಾನ್ ,ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಚಾಲನೆ ನೀಡಿದ್ದರು ,ಪ್ರಾಯೋಗಿಕವಾಗಿ ಪಾಲಿಕೆಯ ಮುಂಭಾಗ ರಸ್ತೆಯವರಗೆ ಕಾಮಗಾರಿ ನಡೆಯಲ್ಲಿದೆ ,
ಇದೇ ವೇಳೆ ಪ್ಲಾಸ್ಟಿಕ್ ರಸ್ತೆ ಕಾಮಗಾರಿಗೆ ಬಗ್ಗೆ ಮಾತನಾಡಿದ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ವಿದೇಶದಲ್ಲಿ ಈಗಾಗಲೇ ಪ್ಲಾಸ್ಟಿಕ್ ರಸ್ತೆ ಪ್ರಯೋಗ ಯಶ್ವಸಿಯಾಗಿದೆ ಪ್ರಾಯೋಗಿಕವಾಗಿ ರಸ್ತೆ ಡಾಂಬಲೀಕರಣಕ್ಕೆ ಇಂದು ಚಾಲನೆ ನೀಡಲಾಗಿದೆ , ಮುಂದೆ ಇಲಾಖೆಯಿಂದ ಮಾಡುವ ಆಲೋಚನೆವಿದೆ ಎಂದರು.
ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ತುರ್ತು ಅನುದಾನ ದುರ್ಬಳಕೆ ಮಾಹಿತಿ ಬಂದಿದೆ ಈ ಬಗ್ಗೆ ಚರ್ಚೆಸುತ್ತೇನೆ ಎಂದರು
ಪ್ಲಾಸ್ಟಿಕ್ ರಸ್ತೆ ಕಾಮಗಾರಿ ಕಾರ್ಯಕ್ರಮದಲ್ಲಿ ಸಚಿವ ರಹೀಂ ಖಾನ್ ,ಸಚಿವ ಸತೀಶ್ ಜಾರಕಿಹೊಳಿ , ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ,ಮೇಯರ್ ಶೋಭಾ ಸೋಮನಾಚೆ ,ಉಪ ಮೇಯರ್ ರೇಷ್ಮಾ ಪಾಟೀಲ್ , ಎಸ್ಪಿ,ಭೀಮಾ ಶಂಕರ್ ಗುಳೇದ ಸೇರಿ ಪಾಲಿಕೆ ಸದಸ್ಯೆ ರಾಜಶೇಖರ್ ಡೋಣಿ ಸೇರಿ ಇತರ ಅಧಿಕಾರಿಗಳು ಇದ್ದರು