ಪಾರ್ವತಿ ಅಧ್ಯಕ್ಷೆ, ಶೋಭಾ ಉಪಾಧ್ಯಕ್ಷೆ ಆಯ್ಕೆ

ಪಾರ್ವತಿ ಅಧ್ಯಕ್ಷೆ, ಶೋಭಾ ಉಪಾಧ್ಯಕ್ಷೆ  ಆಯ್ಕೆ

ರಾಮದುರ್ಗ:ತಾಲೂಕಿನ ಕಟಕೋಳ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಪಾರ್ವತಿ ಮಂಜುನಾಥ ಪಾಟೋಳಿ, ಉಪಾಧ್ಯಕ್ಷರಾಗಿ ಶೋಭಾ ಈರಣ್ಣ ಬಂಡ್ರೋಳಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾದ ನಂತರ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲ ಎರಚಿ ವಿಜಯೋತ್ಸವ ಆಚರಣೆ ಮಾಡಿದರು. ನಂತರ ಮಾತನಾಡಿದ ಅಧ್ಯಕ್ಷೆ ಪಾರ್ವತಿ ಪಾಟೋಳಿ, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸರ್ವರಿಗೂ ಕೃತಜ್ಞತೆ. ನನ್ನ ಅಧಿಕಾರದ ಅವಧಿಯಲ್ಲಿ ಕಟಕೋಳ ಗ್ರಾಮ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ ಎಂದು ಹೇಳಿದರು.