ಹತ್ತನೆಯ ತರಗತಿ ಪರೀಕ್ಷೆ ದಿನ ತಂದೆ ಹೃದಯಾಘಾತದಿಂದ ನಿಧನ ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷೆ ಬರೆಸಿದ ಶಿಕ್ಷಕರು.

ಹತ್ತನೆಯ ತರಗತಿ ಪರೀಕ್ಷೆ ದಿನ ತಂದೆ ಹೃದಯಾಘಾತದಿಂದ ನಿಧನ ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷೆ ಬರೆಸಿದ ಶಿಕ್ಷಕರು.

 

ಹುಕ್ಕೇರಿ: ತಾಲೂಕಿನ ಕೇಸ್ತಿ ಸರಕಾರಿ ಪ್ರೌಢಶಾಲೆಯ 10ನೇ ವಿದ್ಯಾರ್ಥಿನಿ ಕುಮಾರಿ ಮಿದ್ದತ್ ಅಬ್ದುಲರಜಾಕ್ ಸನದಿ ಇವಳ ತಂದೆ ಅಬ್ದುಲರಜಾಕ್ ಸನದಿ ರಾತ್ರಿ 2.30ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದು, ದುಃಖದಲ್ಲಿರುವ ವಿದ್ಯಾರ್ಥಿನಿಯನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮನವೊಲಿಸಿ ಪರೀಕ್ಷಗೆ ಹಾಜರಾಗುವಂತೆ ಮಾಡಿದರು.
ವಿಷಯ ತಿಳಿದ ಕ್ಷೇತ್ರಶಿಕ್ಷಣಾಧಿಕಾರಿ ಮೋಹನ ದಂಡಿನ ಅವರು ಎಸ್.ಜೆ.ಡಿ. ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು
ಬಿಸಿಯೂಟ ಅಧಿಕಾರಿ ಎಸ್.ಪಿ‌.ಹಲಕಿ, ಪಿ‌.ಡಿ.ಪಾಟೀಲ, ಶಿವಾನಂದ ಗುಂಡಾಳಿ, ಕೇಂದ್ರದ ಮುಖ್ಯ ಆಧೀಕ್ಷಕ ಪಿ.ಪಿ.ಖೋತ ಉಪಸ್ಥಿತರಿದ್ದರು.