PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಪ್ರತೀಕ್ಷಾ ಗುಲಪ್ಪನವರ, ಶ್ರೇಯಾಂಕಾ ಹಿರೇಮಠ;*  *ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ*

 

*ಧಾರವಾಡ (ಏ.09):* ಪ್ರಸಕ್ತ ಸಾಲಿನ ಪಿಯುಸಿ ವಿಜ್ಞಾನ ವಿಭಾಗದ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಹುಬ್ಬಳ್ಳಿ ಬೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜ್‍ನ ವಿದ್ಯಾರ್ಥಿ ಪ್ರತೀಕ್ಷಾ ಗುಲಪ್ಪನವರ ಹಾಗೂ ಧಾರವಾಡ ನಿವಾಸಿಯಾದ, ಮಂಗಳೂರ (ವಲಚಿಲ್) ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೇಯಾಂಕಾ ಸುರೇಶ ಹಿರೇಮಠ ಅವರು ಅತ್ಯುತ್ತಮ ಸಾಧನೆ ಮಾಡಿ, ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಪ್ರತೀಕ್ಷಾ ಗುಲಪ್ಪನವರ ಒಟ್ಟು 600 ಅಂಕಗಳಿಗೆ 584 ಅಂಕಗಳೊಂದಿಗೆ ಶೇ.97.33  ಫಲಿತಾಂಶ ಪಡೆದಿದ್ದಾರೆ. ಮತ್ತು ಶ್ರೇಯಾಂಕಾ ಸುರೇಶ ಹಿರೇಮಠ ಅವರು ಒಟ್ಟು 600 ಅಂಕಗಳಿಗೆ 567 ಅಂಕಗಳೊಂದಿಗೆ ಶೇ.94.50 ಫಲಿತಾಂಶ ಪಡೆದಿದ್ದಾರೆ. 
 
ಈ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ. 

*********

WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.