PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಮೂಡಲಗಿ: ಅವರಾದಿ ಸೇತುವೆ ಜಲಾವೃತ: ಸಂಪರ್ಕ ಸ್ಥಗಿತ

 
 
ಮೂಡಲಗಿ: ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಿಡುವು ಇಲ್ಲದೆ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದೆ. ತಾಲ್ಲೂಕಿನ ಅವರಾದಿ ಬಳಿಯ ಘಟಪ್ರಭಾ ನದಿಗೆ ಇರುವ ಬ್ರಿಡ್ಜ್‌ ಕಂ ಬ್ಯಾರೆಜ್‌ ಬುಧವಾರ ಮುಂಜಾನೆ ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ.
 
ನದಿಯ ನೀರಿನ ಮಟ್ಟವು ಇನ್ನು ಏರಿಕೆಯಾಗುವ ಸಂಭವವಿದ್ದು ಮೂಡಲಗಿ ಸುಣಧೋಳಿ ಸಂಪರ್ಕ ಇರುವ ಸುಣಧೋಳಿ ಸೇತುವೆ, ವಡೇರಹಟ್ಟಿ ಸೇತುವೆ, ಕಮಲದಿನ್ನಿ ಸೇತುವೆಗಳು ಜಲಾವೃತವಾಗುವ ಸಾಧ್ಯತೆಗಳು ಇವೆ.
 
ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾದಾಗ ತಾಲ್ಲೂಕಿನ ನಾಲ್ಕು ಸೇತುವೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸಾಮಾನ್ಯವಾಗಿದೆ. ಸೇತುವೆ ಮೇಲೆ ರಭಸದ ನೀರು ಹರಿಯುತ್ತಿದ್ದಾಗಲೂ ಜನರು ಬೈಕ್‌, ಕಾಲ್ನಡಿಗೆಯಲ್ಲಿ ದಾಟುವ ಹುಚ್ಚು ಪ್ರಯತ್ನ ಮಾಡಿ ಅನೇಕ ಸಾವುಗಳು ಈ ಹಿಂದೆ ಇಲ್ಲಿ ಘಟಿಸಿವೆ.
 
 
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.