ನೂತನ ಮೇಯರ್, ಉಪಮೇಯರ್  ಶಾಸಕ ಅಭಯ ಪಾಟೀಲರೊಂದಿಗೆ ವಾರ್ತಾ ಭವನದಲ್ಲಿ ಸಂವಾದ ಕಾರ್ಯಕ್ರಮ ನಾಳೆ ದಿ.‌5 ರಂದು ಬೆಳಿಗ್ಗೆ 9.30 ಕ್ಕೆ

ನೂತನ ಮೇಯರ್, ಉಪಮೇಯರ್  ಶಾಸಕ ಅಭಯ ಪಾಟೀಲರೊಂದಿಗೆ ವಾರ್ತಾ ಭವನದಲ್ಲಿ ಸಂವಾದ ಕಾರ್ಯಕ್ರಮ ನಾಳೆ ದಿ.‌5 ರಂದು ಬೆಳಿಗ್ಗೆ 9.30 ಕ್ಕೆ

 

ಬೆಳಗಾವಿ . ಮುದ್ರಣ ಮಾಧ್ಯಮದ ಪರವಾಗಿ ಈಗ ವಿನೂತನ ಎನ್ನುವಂತೆ ಸಂವಾದ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗುತ್ತಿದೆ. ಈಗ ಮೊದಲ ಹಂತವಾಗಿ ನಾಳೆ ದಿ.‌5 ರಂದು ಬೆಳಿಗ್ಗೆ 9.30 ಕ್ಕೆ ವಾರ್ತಾಭವನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರೊಂದಿಗೆ ಸಂವಾದ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗಿದೆ.
ದಿ. 5 ರಂದೇ ಪಾಲಿಕೆ ಸಾಮಾನ್ಯ ಸಭೆ ಕೂಡ ಇರುವುದರಿಂದ ಈ ಸಂವಾದ ಕಾರ್ಯಕ್ರಮ ವನ್ನು ನಿಗದಿತ ಸಮಯಕ್ಕೆ ಆರಂಭ ಮಾಡಲಾಗುತ್ತದೆ. ಇದರ ಜೊತೆಗೆ ಸನ್ಮಾನ ಕೂಡ ಇದೆ.  ಇದರ ನಂತರ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಅಥವಾ ತಿಂಗಳಿಗೆ ಇಬ್ಬರಂತೆ ಗಣ್ಯರನ್ನು ಕರೆದು ಸಂವಾದ ಮಾಡುವ ಚಿಂತನೆ ಕೂಡ ಇದೆ.  ಆದ್ದರಿಂದ ಎಲ್ಲ ಮಾಧ್ಯಮ ಮಿತ್ರರು ನಾಳೆ. 5 ರಂದು ನಡೆಯುವ ಮೊದಲ ಕಾರ್ಯಕ್ರಮ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಶೋಭೆ ತರಲು ಕೋರಿಕೆ.

*ಪತ್ರಕರ್ತರ ಸಂಘ, ಬೆಳಗಾವಿ.*