ಯಮಕನಮರಡಿ: ಜನರ ಬಹುದಿನಗಳ ಮೂಲಭೂತ ಸೌಕರ್ಯಗಳಿಗೆ ರಸ್ತೆ, ಆಸ್ಪತ್ರೆ, ಜಲಜೀವನ ಯೋಜನೆಗೆ ಒತ್ತು ನೀಡಲಾಗಿದೆ. ಸಾರ್ವಜನಿಕರು ಮುತವರ್ಜಿವಹಿಸಿ ಸದುಪಯೋಗ ವಹಿಸಿಕೊಳ್ಳಬೇಕೆಂದರು ಕಾಮಗಾರಿಗೆ ೧೭ಕೋಟಿ ೨೩ ಲಕ್ಷ ರೂ ಮಂಜೂರಾಗಿದೆಂದರು.
ಅರಳಿಕಟ್ಟಿ ಕ್ರಾಸದಿಂದ ಕರಿಕಟ್ಟಿ ಕ್ರಾಸ ರಸ್ತೆಗೆ 2 ಕೋಟಿ , ಕಲ್ಲಟ್ಟಿ ಯಿಂದ ಇಸ್ಲಾಂಪೂರ ವರಗೆ 3 ಕೋಟಿ,
ಇಸ್ಲಾಂಪೂರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 1ಕೋಟಿ ೮೦ ಲಕ್ಷ ,
ಇಸ್ಲಾಂಪೂರ ಗ್ರಾಮದಲ್ಲಿ ಜಲ ಜೀವನ ಯೋಜನೆಯ ಕುಡಿಯುವ ನೀರಿಗಾಗಿ 1 ಕೋಟಿ ,
ದಂಡಿಕೇರಿಯಿಂದ ಶಹಾಬಂದರ ಕ್ರಾಸ್ ವರಗೆ ರಸ್ತೆ ಸುಧಾರಣೆ ರೂ 4 ಕೋಟಿ ಶಹಾಬಂದರ ಕ್ರಾಸ್ ದಿಂದ ಬೆಳಗಾವಿ ತಾಲೂಕ ಹದ್ದ ವರಗೆ ರಸ್ತೆ ಸುಧಾರಣೆ ರೂ 5 ಕೋಟಿ ಸೇರಿದಂತೆ 17.23 ಕೋಟಿ ಕಾಮಗಾರಿಗಳನ್ನು ಉದ್ಘಾಟನೆ ಚಾಲನೆ ನೀಡಿದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಶಹಾಬಂದರ ಗ್ರಾ.ಪಂ ಅಧ್ಯಕ್ಷ ಶಂಕರ ಡೋಂಬರ,ಆನಂದ ಚೌಗಲಾ ,ಮಕುತುಮ ಸಾಬ್ ಅಪ್ಪು ಬಾಯಿ ಶಮಶೋದ್ದಿನ ಕೋತವಾಲ, ಗುತ್ತಿಗೆದಾರ ಬಸವರಾಜ ಡುಮ್ಮನಾಯಕ , ಎನ್ ಎಸ್ ಚೌಗಲಾ ಎಸ್ ಬಿ ಸುತ್ತಗಟ್ಟಿ, ಅಶೋಕ್ ಭಡಾಳೆ ಗ್ರಾ.ಪಂ ಸದಸ್ಯರು.ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಶ್ರೇಯಸ್ ಸಂಜು ಮುಷ್ಟಗಿ