ಬೆಳಗಾವಿ : ಲಿಂಗಾಯತರು ಏಕಪಕ್ಷೀಯವಾಗಿ ಮತ ಚಲಾಯಿಸುತ್ತಿಲ್ಲ. ಲಿಂಗಾಯತ ಪಂಚಮಸಾಲಿ, ಲಿಂಗಾಯತ ಬಣಜಿಗ ಮತ್ತು ಲಿಂಗಾಯತ ಗಾಣಿಗ ಅವರಂತಹ ಉಪಜಾತಿಗಳ ಆಧಾರದ ಮೇಲೆ ತಮ್ಮ ಮತವನ್ನು ಚಲಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ.ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳು ಎರಡು ಪಕ್ಷಗಳಿಗೆ ಹಂಚಿ ಹೋಗಿವೆ ‘ಕಮಲ’ ಕೈತಪ್ಪಲಿದೆಯೇ ಲಿಂಗಾಯತ ಮತಗಳು!!
ಲೋಕಸಭೆ ಚುನಾವಣೆಯ ಮೂರನೇ ಹಂತದ ಚುನಾವಣೆ ಕರ್ನಾಟಕದಲ್ಲಿ ಎರಡನೇ ಹಂತಕ್ಕೆ ನಾಳೆ ಮೇ 7ರಂದು ಮತದಾನ ನಡೆಯಲಿದೆ, ಕಳೆದ ಕೆಲವು ದಶಕಗಳಲ್ಲಿ ಅನೇಕ ಚುನಾವಣೆಗಳಲ್ಲಿ ಲಿಂಗಾಯತ ಮತಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ನಂಬಿಕೊಂಡಿದ್ದ ಬಿಜೆಪಿಗೆ ಈ ಬಾರಿ ಅಷ್ಟೊಂದು ಸಂಖ್ಯೆಯಲ್ಲಿ ಲಿಂಗಾಯತ ಮತದಾರರು ಕೈಹಿಡಿಯಲಿಕ್ಕಿಲ್ಲ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ
ಲಿಂಗಾಯತ ಪ್ರಬಲ ನಾಯಕ ಎಂದು ಕರೆಯಲ್ಪಡುವ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಎಲ್ಲಾ 14 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದರೂ, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದಷ್ಟೇ ಈ ಬಾರಿ ಕೂಡ ಬರಲು ಕಷ್ಟವಿದೆ ಎಂದು ಪಕ್ಷವು ಅರಿತುಕೊಂಡಿದೆ. ಕಳೆದ ಬಾರಿ ಉತ್ತರ ಕರ್ನಾಟಕ ಭಾಗದ ಎಲ್ಲಾ 14 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿತ್ತು. ಲಿಂಗಾಯತ ಮತದಾರರು ಬಿಜೆಪಿಯನ್ನು ಕೈಹಿಡಿಕೊಂಡು ಬಂದಿದ್ದರು.
ಹುಬ್ಬಳ್ಳಿಯಲ್ಲಿ ಲಿಂಗಾಯತ ಮಠಾಧೀಶ ದಿಂಗಾಲೇಶ್ವರ ಸ್ವಾಮೀಜಿ ಕೂಡ ಆರಂಭದಲ್ಲಿ ಕಣಕ್ಕೆ ಸೇರಿದರು, ಆದರೆ ನಂತರ ಹಿಂತೆಗೆದುಕೊಂಡರು. ಇದೀಗ ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸೋಲಿಸುವ ಉದ್ದೇಶದಿಂದ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮತ್ತೆ ಭಾಷಣ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಚನ ಸಾಹಿತ್ಯದ ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಘೋಷಣೆ ಮತ್ತು ಸಮಾಜ ಸುಧಾರಕ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ಐಕಾನ್ ಎಂದು ಬಣ್ಣಿಸುವುದು ಕಾಂಗ್ರೆಸ್‌ನ ಲಿಂಗಾಯತ ನಿಲುವನ್ನು ಮೃದುಗೊಳಿಸಿದೆ.
ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಬಸವ ನಾಡು ಬಿಜೆಪಿಗೆ ಮಾತ್ರ ಮತ ನೀಡುತ್ತಿತ್ತು, ಆದರೆ ಲಿಂಗಾಯತ ಸಮುದಾಯ ಬಿಜೆಪಿಗೆ ಶಾಶ್ವತವಾಗಿ ಮತ ಬ್ಯಾಂಕ್ ಆಗಿ ಉಳಿಯುತ್ತಿಲ್ಲ ಎಂದು ಹಿಂದಿನ ಚುನಾವಣೆಗಳು ತೋರಿಸಿಕೊಟ್ಟಿದ್ದು ಈ ಚುನಾವಣೆಯಲ್ಲಿ ಅದು ಮುಂದುವರಿಯಲಿದೆ.
ಶಿಸ್ತಿಗೆ ಹೆಸರುವಾಸಿಯಾಗಿದ್ದ ಬಿಜೆಪಿ ಪಕ್ಷದಲ್ಲಿ ಆಂತರಿಕ ಕಲಹವು ಅದರ ದೊಡ್ಡ ಸವಾಲಾಗಿದೆ.ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬೀದರ್‌ನಲ್ಲಿ ಭಗವಂತ ಖೂಬಾ ಮತ್ತು ಪ್ರಭು ಚವ್ಹಾಣ ನಡುವೆ ಪಕ್ಷವು ಭಾರೀ ಭಿನ್ನಮತ ಎದುರಿಸುತ್ತಿದೆ
ಎಐಸಿಸಿ ಅಧ್ಯಕ್ಷರಾಗಿರುವ ಕಲಬುರಗಿಯಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪ್ರಭಾವ ಸಾಕಷ್ಟು ಇರುವುದರಿಂದ ದಲಿತ ಮತಗಳನ್ನು ಒಡೆಯುವುದು ಬಿಜೆಪಿಗೆ ಕಷ್ಟವಾಗಿದೆ. ಈ ಬಾರಿ ಕಾಂಗ್ರೆಸ್ ಪರವಾಗಿ ದಲಿತ ಮತಗಳ ಪ್ರಬಲ ಕ್ರೋಢೀಕರಣ ನಡೆಯಬಹುದು, ಇದನ್ನು ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಅರಿತುಕೊಳ್ಳುತ್ತಿದೆ.
ಎಲ್ಲಾ ಅಭ್ಯರ್ಥಿಗಳು ಲಿಂಗಾಯತ ಅಥವಾ ಬ್ರಾಹ್ಮಣರಾಗಿದ್ದಾರೆ. ಇಲ್ಲಿಯವರೆಗೆ ಬಿಜೆಪಿ ಪರವಾಗಿ ಯಾವುದೇ ಅಲೆ ಇಲ್ಲ. ಆಂತರಿಕ ಕಲಹ ಮತ್ತು ಬಂಡಾಯದಿಂದ ಪಕ್ಷ ಬೆಲೆ ತೆರಬಹುದು. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಗೆ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ ಎಂದರು.