ಉಳ್ಳಾಗಡ್ಡಿ ಖಾನಾಪುರ್ -24.ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ದಿ 25 ರಿಂದ ದಿ 29 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಡಿ 25 ರಂದು ಕುಂಬಾರರ ಮನೆಯಲ್ಲಿ ಶ್ರೀ ದಮ್ಮನ ದೇವಿಯನ್ನು ಪ್ರತಿಷ್ಠಾಪಿಸುವುದು ನಂತರ ಗ್ರಾಮದ ರಾಜಭೀದಿಯ ಮಾರ್ಗವಾಗಿ ಶ್ರೀ ದಮನ ದೇವಿಯ ಹೊನ್ನಾಟದ ಮೆರವಣಿಗೆ ರಾತ್ರಿ 9:00ಗೆ ಪ್ರಾರಂಭವಾಗುವುದು ತದನಂತರ ಮುಖ್ಯ ರಾಜ್ಯ ಮಾರ್ಗದಿಂದ ಹಕ್ಕುದಾರರಾದ ಬಾಬಾ ಗೌಡ ಅಪ್ಪ ಗೌಡ ಪಾಟೀಲ್ ಅವರ ಮನೆಯ ಮುಂದೆ ಹಕ್ಕುದಾರರಿಂದ ದಮನ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ರಾತ್ರಿ 1 ಗಂಟೆಗೆ ಅದೇ ಮಾರ್ಗವಾಗಿ ದೇವಿಯ ಹೊನ್ನಾಟದ ಮರವಣಿ ಮೆರವಣಿಗೆ ಸಂಪೂರ್ಣ ರಾತ್ರಿ ನಡೆಯುವುದು ದಿ 26 ರಂದು ಬೆಳಗಿನ ಜಾವ ದೇವಿಯನ್ನು ಮುಖ್ಯ ವೇದಿಕೆಯಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ ನಡೆಯಲಿದೆ ರಾತ್ರಿ ಬಯಲು ನಾಟಕ ದಿ 27ರಂದು ಮುಂಜಾನೆ ಹಕ್ಕುದಾರರಿಂದ ನೈವೇದ್ಯ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಂದ ನೈವೇದ್ಯ ತದನಂತರ ವಿವಿಧ ಸ್ಪರ್ಧೆಗಳು ನಡೆಯಲಿವೆ . ದಿ 28 ರಂದು ಕುದುರೇಶರತ್ತು ಟ್ರ್ಯಾಕ್ಟರ್ ಸ್ಪರ್ಧೆ ನಡೆಯಲಿದೆ ಸಂಜೆ ಸಾಮಾಜಿಕ ನಾಟಕ . ಡಿ 29 ರಂದು ಸೈಕಲ್ ಓಡುವ ಭವ್ಯ ಸ್ಪರ್ಧೆ ತದನಂತರ ಮಧ್ಯಾಹ್ನ 3 ಗಂಟೆಗೆ ಹಕ್ಕುದಾರರಿಗೆ ಆಯಾರು ಮಾಡುವ ಕಾರ್ಯಕ್ರಮ ನಂತರ ದೇವಿಯ ಹೊನ್ನಾಟದ ಮೆರವಣಿಗೆ . ಪ್ರಾರಂಭ ಈ ಮೆರವಣಿಗೆ ವಿಶೇಷವಾಗಿದ್ದು ಸುಮಾರು 11 ಹಳ್ಳಿಗಳ ಭಕ್ತಾದಿಗಳಿಂದ ದೇವಿಯ ದರ್ಶನ ಪಡೆದು ಹರಕೆ ತೀರಿಸುವ ವಿಶೇಷ ಸಮಯ ತದನಂತರ ಸಂಜೆ ಸೀಮೆಗೆ ಕಳಿಸುವ ಕಾರ್ಯಕ್ರಮ ನಡೆಯಲಿದೆ . ಅದೇ ದಿನ ರಾತ್ರಿ ಭವ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಕಮಿಟಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಈ ಸಂದರ್ಭದಲ್ಲಿ ಬಾಬಾ ಗೌಡ ಪಾಟೀಲ್ ರಾಜು ಅವಟೆ ಲಖಮ ಗೌಡ ಪಾಟೀಲ್ ಮಹಾರುದ್ರ ಜರಳಿ ಪ್ರಸಾದ್ ಕುಲಕರ್ಣಿ ಪ್ರಕಾಶ್ ಸುರುವೇ ಮಾರುತಿ ಗವಾನಿ ಸೇರಿದಂತೆ ಗ್ರಾಮದ ಹಕ್ಕುದಾರರು ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು .
ಫೋಟೋ :- ಉಳ್ಳಾಗಡ್ಡಿ ಖಾನಾಪುರದ ಶ್ರೀ ದಮನ ದೇವಿಯ ಭಾವಚಿತ್ರ ಮತ್ತು ಶ್ರೀ ಲಕ್ಷ್ಮಿ ದೇವಿಯ ಚಿತ್ರ