ಕೊಪ್ಪಳದಲ್ಲಿ ಇಂದು ಭಾರತ ಕ್ರಿಕೆಟ್‌ ಆಟಗಾರ ಅಜರುದ್ದೀನ್‌ ರೋಡ ಶೋ

ಕೊಪ್ಪಳದಲ್ಲಿ ಇಂದು ಭಾರತ ಕ್ರಿಕೆಟ್‌ ಆಟಗಾರ ಅಜರುದ್ದೀನ್‌ ರೋಡ ಶೋ

 

ಕೊಪ್ಪಳ: ಭಾರತ ಕ್ರಿಕೆಟ್‌ ತಂಡ ಮಾಜಿ ನಾಯಕ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಮಹಮ್ಮದ್ ಅಜರುದ್ದೀನ್‌ ಗುರುವಾರ ನಗರದಲ್ಲಿ ರೋಡ್‌ ಶೋ ನಡೆಸುವ ಮೂಲಕ ಮತಯಾಚನೆ ಮಾಡಲಿದ್ದಾರೆ.

ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಮತ ಕೇಳಲು ಬರಲಿದ್ದಾರೆ.

ಸಂಜೆ 5 ಗಂಟೆಗೆ ಇಲ್ಲಿನ ಅಶೋಕ ವೃತ್ತದಿಂದ ಗಡಿಯಾರ ಕಂಬದ ತನಕ ಶೋ ನಡೆಸುವರು. ಅಜರುದ್ದೀನ್‌ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಾಗಿದ್ದಾರೆ.