ವಿಶೇಷ ಲೇಖನ
ಹಿಂದೂಗಳ ಹೊಸವರ್ಷ ಎಂದೇ ಕರೆಯಲಾಗುವ ಯುಗಾದಿ ಹಬ್ಬಕ್ಕೆ ಬೇವು-ಬೆಲ್ಲದಷ್ಟೇ ಈ ಸಂದರ್ಭದಲ್ಲಿ ತಯಾರಿಸುವ ಪಚಡಿ ಕೂಡ ಬಹಳ ಸ್ಪೆಷಲ್. ವಿಶೇಷವಾಗಿ ಈ ಹಬ್ಬದ ಸಂದರ್ಭದಲ್ಲೇ ಅಡುಗೆಯಲ್ಲಿ ಪಚಡಿಯನ್ನೂ ಕೂಡ ತಯಾರಿಸಲಾಗುತ್ತದೆ. ಬೇವಿನ ಸೊಪ್ಪು ಮತ್ತು ಹೂಗಳು ಮಾವಿನಕಾಯಿ ಬೆಲ್ಲ ಕಾಳು ಮೆಣಸು ಉಪ್ಪು ಈ ಪ್ರಮುಖ ಸಾಮಗ್ರಿಗಳನ್ನು ಬಳಸಿ ಪಚಡಿಯನ್ನು ತಯಾರಿಸುತ್ತಾರೆ.
ಯುಗಾದಿ ಪಚಡಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಿದ್ದು, ಇದರಲ್ಲಿನ ಕಹಿಬೇವಿನ ಎಲೆ, ಬೇವಿನ ಸೊಪ್ಪಿನಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಇವುಗಳಲ್ಲಿ ಆ್ಯಂಟಿಆಕ್ಸಿಡೆAಡ್ ಹೆಚ್ಚಾಗಿರುವುದರಿಂದ ಇವುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಿಂದ ದೇಹದಲ್ಲಿನ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ. ಇವು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಉರಿಯೂತದ ಸಮಸ್ಯೆ ಇರುವವರಿಗೆ ಇದು ತುಂಬಾ ಒಳ್ಳೆಯದು.
ಇನ್ನು ಮಾವು ಸೀಸನಲ್ ಆಹಾರ, ಯಾವುದೇ ಸೀಸನಲ್ ಆಹಾರ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಿಸಿಲಿನಲ್ಲಿ ಕಾಡುವ ಕಾಯಿಲೆಗಳನ್ನು ತಡೆಗಟ್ಟಲು ಮಾವಿನಕಾಯಿ ಸಹಕಾರಿಯಾಗಿದ್ದು, ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬೆಲ್ಲ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬಿಸಿಲಿನಲ್ಲಿ ಬೆಲ್ಲದ ಪಾನೀಯ ಸೇವಿಸಿದರೆ ಇನ್ನು ಒಳ್ಳೆಯದು. ಇದು ಬಿಸಿಲಿನ ಸುಸ್ತನ್ನು ಬೇಗನೆ ನಿವಾರಿಸುತ್ತದೆ. ಕಾಳು ಮೆಣಸು ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದು ಅಜೀರ್ಣ, ಖಿನ್ನತೆ, ಕೆಮ್ಮು ಮುಂತಾದ ಕಾಯಿಲೆಗಳನ್ನು ತಡೆಗಟ್ಟುತ್ತದೆ.
ಯುಗಾದಿ ಪಚಡಿ ತಯಾರಿಸುವುದು ಹೇಗೆ? * 1 ಚಮಚ ಹುಣಸೆಹಣ್ಣನ್ನು ಒಂದು ಚಿಕ್ಕ ಕಪ್ ಬಿಸಿ ನೀರಿನಲ್ಲಿ ಹಾಕಿಡಿ. ನಂತರ ಅದನ್ನು ಕಿವುಚಿ ಹುಣಸೆ ರಸ ತೆಗಿಯಿರಿ. * ನಂತರ ಅದಕ್ಕೆ ಮುಕ್ಕಾಲು ಕಪ್ ನೀರು ಸೇರಿಸಿ * ಬೆಲ್ಲವನ್ನು ಪುಡಿ ಮಾಡಿ ಅದಕ್ಕೆ ಸೇರಿಸಿ ಚೆನ್ನಾಗಿ ಕಲೆಸಿ. * ನಂತರ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ ಸೇರಿಸಿ, ಬೇವಿನ ಹೂ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.* ನಂತರ 1/4 ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿದ ಬಳಿಕ ಇದನ್ನು ಸೇವಿಸಿಬಹುದು.
ಅಂದಹಾಗೆ ನಾನು ಮೊಟ್ಟಮೊದಲ ಬಾರಿಗೆ ಈ ಯುಗಾದಿ ಪಚಡಿಯನ್ನು ಸೇವಿಸಿದ್ದು, ಬೆಂಗಳೂರಿನ ನನ್ನ ಕ್ಲೋಸ್ ಫ್ರೆಂಡ್ ನಳಿನಿ ದೇಶಪಾಂಡೆ ಮನೆಯಲ್ಲಿ. ಆ ದಿನ ಯುಗಾದಿ ಪಚಡಿ ತಯಾರಿಸಿ ತಂದು ನನಗೆ ಸೇವಿಸಲು ಕೊಟ್ಟು ಆಕೆ ಮೇಲಿನಂತೆ “ಪಚಡಿಯ ಪುರಾಣ” ಹೇಳಿದೆಲ್ಲಾ ಈ ಯುಗಾದಿ ಸಂದರ್ಭದಲ್ಲಿ ನೆನಪಾಗಿ, ನಿಮಗೂ ಯುಗಾದಿ ಪಚಡಿ ಸ್ಪೇಷಾಲಿಟಿ ಹೇಳಬೇಕೆನಿಸಿ ಹೇಳಿದೆ. ಈ ಬಾರಿ ನೀವೂ ನಿಮ್ಮ ಮನೆಯಲ್ಲಿ ಈ ಯುಗಾದಿಗೆ ಸ್ಪೇಷಲ್ ಆಗಿ ಪಚಡಿ ತಯಾರಿಸಿ, ಸೇವಿಸಿ. ಹ್ಯಾಪಿ ಯುಗಾದಿ ಟು ಆಲ್…