This is the title of the web page
This is the title of the web page

ರಾಮತೀರ್ಥ ನಗರದಲ್ಲಿ ಭಕ್ತಿ ಭಾವದೊಂದಿಗೆ ಹನುಮ ಜಯಂತಿ ಆಚರಣೆ

ರಾಮತೀರ್ಥ ನಗರದಲ್ಲಿ ಭಕ್ತಿ ಭಾವದೊಂದಿಗೆ ಹನುಮ ಜಯಂತಿ ಆಚರಣೆ

 

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರ ರಹವಾಸಿಗಳಿಂದ ಕಣಬರ್ಗಿ ಕೆರೆಯ ಪಕ್ಕದಲ್ಲಿರುವ ಶ್ರೀ ಹನುಮಾನ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳು ನೆರವೇರಿದವು. ಕೆಲವೆಡೆ ಪಾನಕ, ಪ್ರಸಾದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಹಿಳೆ ಯರು ತೊಟ್ಟಿಲೋತ್ಸವ ನಡೆಸಿದರು.

ಸುರೇಶ ಯಾದವ ಫೌಂಡೇಶನ್‌ ಅಧ್ಯಕ್ಷರಾದ ಸುರೇಶ ಯಾದವ ಮಾತನಾಡಿ. ಹನುಮಂತನು ರಾಮನ ಕಟ್ಟಾ ಭಕ್ತ, ವಿಷ್ಣುವಿನ ಅವತಾರ, ಅವನ ಅಚಲ ಭಕ್ತಿಗೆ ವ್ಯಾಪಾಕವಾಗಿ ಹೆಸರುವಾಸಿಯಾದ ಹನುಮಂತನನ್ನು ವಾಯುದೇವನಾದ ವಾಯುವಿನ ಸ್ವರ್ಗಿಯ ಮಗ ಎಂದು ಕರೆಯುತ್ತಾರೆ.

ಹನುಮಂತನು ಶಕ್ತಿ ಮತ್ತು ಧೈರ್ಯದ ಪ್ರತಿರೂಪ. ಅವನು ಸಮುದ್ರಗಳನ್ನು ದಾಟಬಲ್ಲನು, ಪರ್ವತಗಳನ್ನು ಚಲಿಸಬಲ್ಲನು ಮತ್ತು ಮಾರಣಾಂತಿಕ ರಾಕ್ಷಸರನ್ನು ಸಂಹರಿಸಬಲ್ಲನು. ಅವನ ಶಕ್ತಿ, ಸದಾಚಾರ ಮತ್ತು ಭಕ್ತಿಗಾಗಿ, ಅವನು ಅಮರತ್ವದಿಂದ ಆಶೀರ್ವದಿಸಲ್ಪಟ್ಟನು. ಪುರಾಣಗಳ ಪ್ರಕಾರ, ಶ್ರೀರಾಮನು ತನ್ನ ಭೌತಿಕ ರೂಪವನ್ನು ತೊರೆದಾಗ, ಹನುಮಂತನು ಅವನೊಂದಿಗೆ ಹೋಗಲು ಬಯಸಿದನು. ಆದರೆ ಪ್ರಪಂಚದಲ್ಲಿ ಹನುಮಂತನ ಇರುವಿಕೆ ಎಷ್ಟು ಮುಖ್ಯ ಎಂದು ರಾಮನಿಗೆ ಗೊತ್ತಿತ್ತು. ಹಾಗಾಗಿ, ಆಂಜನೇಯನಿಗೆ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಲು ಮತ್ತು ತನ್ನ ಶಕ್ತಿಯಿಂದ ಜನರಿಗೆ ಸಹಾಯ ಮಾಡಲು ರಾಮನು ಆದೇಶಿಸಿದನು.

ಅಂದಿನಿಂದ, ಚಿರಂಜೀವಿ ಹನುಮಂತನು ಭೂಮಿಯ ಮೇಲೆ ನೆಲೆಸಿದ್ದಾನೆ. ಇಲ್ಲಿನ ಹನುಮ ಬೇಡಿದವರಿಗೆ ವರ ಕೊಡುವವನಾಗಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿವರ್ಷ ಹನುಮ ಜಯಂತಿಯನ್ನು ಶ್ರದ್ಧೆ, ಭಕ್ತಿಯಿಂದ ಧಾರ್ಮಿಕ ಕಾರ್ಯಗಳ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದ್ದೆವೆ. ಶ್ರೀ ಹನುಮಂತನ್ನು ದೇಶದ ಆರಾದ್ಯ ದೇವ, ಅವರ ಕಾರ್ಯಗಳನ್ನು ಮಕ್ಕಳಿಗೆ ತಿಳಿಸಿ, ಅವರ ಮಾರ್ಗದರ್ಶನ ನಾವೆಲ್ಲರೂ ಸಾಗೋಣ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಪ್ಪಯ್ಯ ಕೊಲ್ಕರ, ಗುರುಪುತ್ರಪ್ಪ ತೋರಗಲ್, ಅರ್ಜುನ ಊರಬೀನಟ್ಟಿ, ಪವಿತ್ರಾ ಪಾಟಿಲ, ಕೆಂಪಣ್ಣ ಜಿನರಾಳ, ಅಭಿಷೇಕ ಅಗಸಗಿ, ಶಿವಲಿಂಗಪ್ಪ ಕಬಾಡಗಿ, ಮಾರುತಿ ಭಾಸ್ಕರ, ರಾಜು ಪಾಟೀಲ ಹಾಗೂ ಸಂತೋಷ ಮೆರೆಕಾರ ಉಪಸ್ಥಿತರಿದ್ದರು. ರಾಮತೀರ್ಥ ನಗರ ಹಾಗೂ ಸುತ್ತಮುತ್ತಲಿನ ರಹವಾಸಿಗಳು ಮಹಾಪ್ರಸಾದ ಸ್ವೀಕರಿಸಿ ಧನ್ಯರಾದರು.