This is the title of the web page
This is the title of the web page

ಕತ್ತಿ ಕುಟುಂಬದ ಕಿರುಕುಳದಿಂದ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ ಪಂಚಮಸಾಲಿ ಪ್ರಮುಖ ನಾಯಕ : ಮಾಜಿ ಸಚಿವ ಶಶಿಕಾಂತ ನಾಯಕ

ಕತ್ತಿ ಕುಟುಂಬದ ಕಿರುಕುಳದಿಂದ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ ಪಂಚಮಸಾಲಿ ಪ್ರಮುಖ ನಾಯಕ : ಮಾಜಿ ಸಚಿವ ಶಶಿಕಾಂತ ನಾಯಕ

 

ಬೆಳಗಾವಿ: ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಟಿಕೆಟ್ ನೀಡಿದ್ದಾರೆ. ಯಮಕನಮರಡಿಯಲ್ಲಿ ಉಸ್ತುವಾರಿ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲಾ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.

ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಮಟ್ಟದಲ್ಲಿ ಬೆಳೆಸಿದ್ದ ಬಾಬಾಗೌಡರು ಹಾಗೂ ನಾನು ಆದರೆ ಈ ಬಾರಿ ಹುಕ್ಕೇರಿ ಮತಕ್ಷೇತ್ರದಿಂದ ಟಿಕೆಟ್ ನೀಡದೆ ಇರುವುದರಿಂದ ನಾನು ಕತ್ತಿ ಅವರ ಕುಟುಂಬದ ಕಿರುಕುಳದಿಂದ ಬಿಜೆಪಿ ನೀಡಿರುವ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಹೇಳಿದರು.

ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಟಿಕೆಟ್ ನೀಡಿದ್ದಾರೆ. ಯಮಕನಮರಡಿಯಲ್ಲಿ ಉಸ್ತುವಾರಿ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲಾ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.

ಕಳೆದ 20 ವರ್ಷದಿಂದ ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿ ಹಳ್ಳಿಯ ಮಟ್ಟದಲ್ಲಿ ಇರದ ಪಕ್ಷವನ್ನು ಬಾಬಾಗೌಡ ಹಾಗೂ ನಾವು ಸೇರಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡಿದ್ದೇವು. ಐದಾರು ಬಾರಿ ಕೆಲಸ ಮಾಡಿದ್ದನ್ನು ನೋಡಿ ಪಕ್ಷ ನನಗೆ ಟಿಕೆಟ್ ನೀಡಿದ್ದರು. ಆಗ ಗೆಲವು ಸಾಧಿಸಿದ್ದೆ. ಅಲ್ಲದೆ ಸಚಿವನಾಗಿಯೂ ಕೂಡ ಕೆಲಸ ಮಾಡಿದ್ದೇನೆ ಎಂದರು.ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕೆಂದು ಮೊದಲ ಬಾರಿಗೆ ಅಧಿವೇಶ ನಡೆಸಿ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ನಿರಂತರ ಕಾರ್ಯ ಚಟುವಟಿಕೆ ಮಾಡಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.ಉಮೇಶ ಕತ್ತಿ ಹುಕ್ಕೇರಿ ಮತಕ್ಷೇತ್ರದಿಂದ ಬಿಜೆಪಿಗೆ ಬಂದ ಬಳಿಕ ನನಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಅದು ಕೇವಲ 11 ತಿಂಗಳು ಮಾತ್ರ ನೀಡಿತ್ತು. ಪಂಚಾಯತ್ ಕೆಲಸ ಹೆಚ್ಚಿಗೆ ಆಗಿದ್ದಂತೆ ಚಿನ್ನದ ಪದಕ ಬಂದಿದ್ದು ನನ್ನ ಅವಧಿಯಲ್ಲಿ ಎಂದ ಅವರು, ಪಕ್ಷ ನೀಡಿದ ಕೆಲಸವನ್ನು ನಾನು ಚಾಚು ತಪ್ಪದೆ ಮಾಡಿದ್ದೇನೆ ಎಂದರು

.ಉಮೇಶ ಕತ್ತಿ ನಿಧನ ಬಳಿಕ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಳಿಯೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಈಗಲೂ ನನಗೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.