This is the title of the web page
This is the title of the web page

ಹುಕ್ಕೇರಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತ- ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿಕೆ

ಹುಕ್ಕೇರಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತ- ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿಕೆ

 

ಹುಕ್ಕೇರಿ : ಹುಕ್ಕೇರಿ ಮತಕ್ಷೇತ್ರದಲ್ಲಿ ಕ್ಷೇತ್ರ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ  ಕಾಮಗಾರಿ ಮಾಡದೆ ಕೋಟ್ಯಂತರ ರೂ,ಗಳ ಖರ್ಚು ತೋರಿಸಿದ್ದು ಈ ಬಗ್ಗೆ ಸಮಗ್ರ ತನಿಖೆ  ನಡೆಸಲು ಸರ್ಕಾರಕ್ಕೆ ಆಗ್ರಹಿಸಿದರು. ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ಪಾಟೀಲ ಗುಡುಗಿದರು.

ಪಟ್ಟಣದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಕೈಗೊಂಡಿರುವ ಕಾಮಗಾರಿಗಳ ಪಟ್ಟಿಯುಳ್ಳ ಕರಪತ್ರಗಳನ್ನು ಪ್ರಕಟಿಸಿದೆ. ಆದರೆ, ಕೆಲ ಯೋಜನೆಗಳ ಕಾಮಗಾರಿ ಮಾಡದೆ ವೆಚ್ಚ ತೋರಿಸಲಾಗಿದೆ. ಇದರಲ್ಲಿ ಕತ್ತಿ ಸಹೋದರರು ಕೋಟ್ಯಂತರ ರೂ,ಗಳನ್ನು ಗುಳುಂ ಮಾಡಿ ಸರ್ಕಾರ ಹಾಗೂ ಜನರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಹುಕ್ಕೇರಿ ಕೋರ್ಟ್ ಸರ್ಕಲ್ ನವೀಕರಣ ಹೆಸರಿನಲ್ಲಿ ೨ ಕೋಟಿಗೂ ಅಧಿಕ ಹಣ ಬೋಗಸ್ ಖರ್ಚು ಹಾಕಲಾಗಿದೆ. ಅವ್ಯವಹಾರ ನಡೆಸಿ ದಾಖಲೆಗಳನ್ನು ಮುಚ್ಚಿ ಹಾಕಲಾಗಿದೆ. ಭ್ರಷ್ಟಾಚಾರ ನಡೆದಿರುವ ಎಲ್ಲ ಕಾಮಗಾರಿಗಳ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು ಸೂಕ್ತ ತನಿಖೆ ನಡೆಸಲಾಗುವುದು. ಎಂದು ಅವರು ಎಚ್ಚರಿಸಿದರು.
ಕ್ಷೇತ್ರದ ಜನರು ಕತ್ತಿ ಕುಟುಂಬದ ದುರಾಡಳಿತಕ್ಕೆ ಬೇಸತ್ತಿದ್ದು ಜನರ ಒಲವು ಕಾಂಗ್ರೆಸ್ ಕಡೆಗೆ ತಿರುಗಿದ್ದರಿಂದ ತಮ್ಮ ಗೆಲುವು ನಿಶ್ಚಿತ. ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಜನಪ್ರತಿನಿಧಿ ಮತ್ತು ಅವರ ಅನುಯಾಯಿಗಳು ಜನರನ್ನು ಶೋಷಿಸುತ್ತಾ ಬಂದಿದ್ದಾರೆ ಎಂದು ಅವರು ಆಪಾದಿಸಿದರು.
ರೈತರ ಕಬ್ಬಿನ ತೂಕದಲ್ಲಿ ಮೋಸ ಮಾಡಲಾಗಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಸಂಕೇಶ್ವರ ಹಿರಾಶುಗರ್ಸ್ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವನ್ನು ಇಂದು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ. ಅಲ್ಲಿನ ನೌಕರರಿಗೆ ಸರಿಯಾಗಿ ಸಂಬಳ ವಿತರಣೆ ಮಾಡುತ್ತಿಲ್ಲ. ನೌಕರರು ಆತಂಕದಲ್ಲಿ ಕೆಲಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಪುರಸಭೆ ಸದಸ್ಯ ಇಮ್ರಾನ್ ಮೋಮಿನ್, ಮುಖಂಡರಾದ ಮೌನೇಶ ಪೋತದಾರ, ರವಿ ಕರಾಳೆ, ಮಹಾಂತೇಶ ಗುಮಚಿ, ಸಲೀಮ್ ಕಳಾವಂತ, ರಾಜು ಸಿದ್ನಾಳ, ಮಹೇಶ ಗುಮಚಿ, ಶಾನೂರ್ ತಹಶೀಲ್ದಾರ, ಇರ್ಷಾದ ಮೊಕಾಶಿ, ಕಬೀರ್ ಮಲೀಕ್ ಮತ್ತಿತರರು ಉಪಸ್ಥಿತರಿದ್ದರು.