ಬೆಳಗಾವಿ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರು ಜನ ಆರೋಪಿಗಳ ಪೈಕಿ ನಾಲ್ಕು ಜನರನ್ನು ಡಕಾಯಿತಿ ಪ್ರಕರಣದಲ್ಲಿ ಸೆ.18 ರಂದು ಜೈಲಿಗೆ ಕಳುಹಿಸಲಾಗಿದೆವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವಿಷಯ ಬಹಿರಂಗ ಪಡಿಸದಂತೆ ಜೀವ ಬೇದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 5 ರಂದು ಸಂತೆಗೆಂದು ಗೋಕಾಕ ನಗರಕ್ಕೆ ಆಗಮಿಸಿದ ಮಹಿಳೆಗೆ ಪಕ್ಕದ ಗ್ರಾಮದಲ್ಲಿರುವ ಪರಿಚಯುಳ್ಳ ವ್ಯಕ್ತಿ ಭೇಟಿಯಾಗಿದ್ದರಿಂದ ಇಬ್ಬರು ಪರಸ್ಪರ ಮಾತನಾಡುತ್ತಾ. ಚಹಾ ಕುಡಿಯಲು ಹೋಟೆಲ್‌ಗೆ ಹೋಗುವುದಾಗಿ ಮಾತನಾಡಿಕೊಂಡಿದ್ದಾರೆ. ಇದೇ ಸಮಯಕ್ಕೆ ಪರಾರಿಯಾಗಿರುವ ಬಸವರಾಜ ಖಿಲಾರಿ, ಮಹಿಳೆಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿಗೆ ಪರಿಚಯ ಇರುವುದರಿಂದ ನಮ್ಮ ಮನೆಗೆ ಬನ್ನಿ ಚಹಾ ಕುಡಿಯಲು ಎಂದು ಹೇಳಿ ಪುಸಲಾಯಿಸಿ ಗೋಕಾಕ ನಗರದಲ್ಲಿರುವ ಎಲ್‌ಇಟಿ ಕಾಲೇಜು ರಸ್ತೆಯಲ್ಲಿರುವ ಆದಿತ್ಯ ನಗರದಲ್ಲಿರುವ ತನ್ನ ರೂಮಿಗೆ ಕರೆದುಕೊಂಡು ಹೋಗಿ ಬಸವರಾಜ ಖಿಲಾರಿ ರೂಮನ ಕೂಡಿಹಾಕಿ ಹೊರಗಡೆಯಿಂದ ಚಿಲಕ ಹಾಕಿಕೊಂಡು ಹೋಗಿದ್ದಾನೆ.ಬಳಿಕ ಈ ವಿಷಯವನ್ನು ಬಸರಾಜ ಖಿಲಾರಿ ಬೆಣಚಿನಮರಡಿ ಖಿಲಾರಿ ಗ್ಯಾಂಗ್‌ನ ರಮೇಶ ಉದ್ದಪ್ಪ ಖಿಲಾರಿ, ದುರ್ಗಪ್ಪ ವಡ್ಡರ, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣ ಪ್ರಕಾಶ ಪೂಜೇರಿ, ರಾಮಸಿದ್ದಪ್ಪ ಗುರುಸಿದ್ದ ತಪ್ಸಿ ತಿಳಿಸಿ ಪ್ಲ್ಯಾನ್ ಮಾಡಿಕೊಂಡು ರೂಮಗೆ ಬಂದು ಬಾಗಿಲ ತೆಗೆಯುವಂತೆ ಬಾಗಿಲು ತಟ್ಟಿದ್ದಾರೆ. ರೂಮನಲ್ಲಿದ್ದ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ಮಾಡಿ, ಚಾಕೂ, ಜಂಭೆ ತೋರಿಸಿ ವ್ಯಕ್ತಿಯ ಕಿಸೆಯಲ್ಲಿದ್ದ ₹ 2 ಸಾವಿರ, ಪರ್ಸ ,ಎಟಿಎಂ, ಮೊಬೈಲ್ ತೆಗೆದುಕೊಂಡಿದ್ದಾರೆ. ಬಳಿಕ ಮಹಿಳೆ ಮೇಲೆ ಹಲ್ಲೆ ನಡೆಸಿ ಅವಳ ಹತ್ತಿರವಿದ್ದ ₹2 ಸಾವಿರ ನಗದು, ಕಿವಿಯಲ್ಲಿದ್ದ ಓಲೆ, ಪರ್ಸ್, ಮೊಬೈಲ್ ಕಸಿದುಕೊಂಡು, ನಮಗೆ ₹ 2 ಲಕ್ಷ ಹಣ ಕೊಟ್ಟರೆ ಮಾತ್ರ ನಿಮ್ಮನ್ನು ಬೀಡುತ್ತೇವೆ ಎಂದು ಹೆದರಿಸಿದ್ದಾರೆ. ಬಳಿಕ ಮಹಿಳೆ ಮತ್ತು ಪುರಷನನ್ನು ಜೋಡಿಯಾಗಿ ನಿಲ್ಲಿಸಿ ಪೊಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ಮಹಿಳೆಗೆ ಚಾಕು ತೋರಿಸಿ ಆರೋಪಿತರೆಲ್ಲರೂ ಕೂಡಿಕೊಂಡು ಬಾಯಿಗೆ ವಸ್ತ್ರ ಕಟ್ಟಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೇದರಿಕೆ ಹಾಕಿದ್ದರು ಎಂದು ಮಾಹಿತಿ ನೀಡಿದರು.ಈ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರು ಜನ ಆರೋಪಿಗಳ ಪೈಕಿ ನಾಲ್ಕು ಜನರನ್ನು ಡಕಾಯಿತಿ ಪ್ರಕರಣದಲ್ಲಿ ಸೆ.18 ರಂದು ಜೈಲಿಗೆ ಕಳುಹಿಸಲಾಗಿದೆ. ಡಕಾಯತಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದ ರಮೇಶ ಉದ್ದಪ್ಪ ಖಿಲಾರಿ ಹಾಗೂ ಬಸವರಾಜ ಖಿಲಾರಿ ಪತ್ತೆಗೆ ಜಾಲ ಬಿಸಿದ್ದರು. ಸೆ. 5 ರಂದು ಪ್ರಕರಣ ನಡೆದಿದ್ದರೂ, ಮಹಿಳೆ ಮಾತ್ರ ಮಾನ ಮಾರ್ಯದೆಗೆ ಹೆದರಿ ದೂರು ನೀಡಲು ಮುಂದಾಗಲಿಲ್ಲ. ಈ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಮಹಿಳೆಯನ್ನು ವಿಚಾರಿಸಿ ಧೈರ್ಯ ತುಂಬಿದ್ದಾರೆ. ಬಳಿಕ ಸೆ.29 ರಂದು ನೊಂದ ಮಹಿಳೆ ಗೋಕಾಕ ನಗರ ಪೊಲೀಸ್ ಠಾಣೆಗೆ ಆಗಮಿಸಿ ಅತ್ಯಾಚಾರ ಎಸಗಿದವರ ಕುರಿತು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬಿಸಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಗೋಕಾಕ ಡಿವೈಎಸ್‌ಪಿ ಡಿ.ಎಂ.ಮುಲ್ಲಾ, ಪೊಲೀಸ್ ಇನಸ್ಪೆಕ್ಟರ್ ಗೋಪಾಲ ರಾಠೋಡ, ಪಿಎಸ್‌ಐಗಳಾದ ಕಿರಣ ಮೋಹಿತೆ, ಎಚ್.ಡಿ.ಯರಜರ್ವಿ, ಎಂ.ಡಿ.ಘೋರಿ ಸಿಬ್ಬಂದಿಗಳಾದ ವಿಠ್ಠಲ ನಾಯ್ಕ, ಬಿ.ವಿ.ನೇರ್ಲಿ, ಶಿವಾನಂದ ಕಸ್ತೂರಿ, ಹಾಲೋಳ್ಳಿ, ಮಂಜುನಾಥ ತಳವಾರ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.ಬೆಣಚಿನಮರಡಿ ಖಿಲಾರಿ ಗ್ಯಾಂಗನ ಸದಸ್ಯೆ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮನೆಗಳ್ಳತನ, ಅಕ್ರಮ ಶಸ್ತ್ರಾಸ್ತ, ಜಾನುವಾರ ಕಳ್ಳತನ ಸೇರಿದಂತೆ ಇನ್ನೂ ಹಲವು ಆರೋಪದಡಿ ಪ್ರಕರಣ ದಾಖಲಾಗಿವೆ. ರಮೇಶ ಖಿಲಾರಿ ವಿರುದ್ದ ಘಟಪ್ರಭಾ, ಗೋಕಾಕ ನಗರ, ಗೋಕಾಕ ಗ್ರಾಮೀಣ, ಅಂಕಲಗಿ ಠಾಣೆ ಸೇರಿದಂತೆ ಒಟ್ಟು 8 ಪ್ರಕರಣ, ದುರ್ಗಪ್ಪ ಸೋಮಲಿಂಗ ವಡ್ಡರ ವಿರುದ್ಧ ಗೋಕಾಕ ಗ್ರಾಮೀಣ, ಅಂಕಲಗಿ, ಗೋಕಾಕ ನಗರ ಠಾಣೆ ಸೇರಿದಂತೆ ಒಟ್ಟು 6 ಪ್ರಕರಣ, ಕೃಷ್ಣ ಪ್ರಕಾಶ ಪೂಜೇರಿ ವಿರುದ್ಧ ಗೋಕಾಕ ನಗರ, ಗೋಕಾಕ ಗ್ರಾಮೀಣ, ಅಂಕಲಗಿ ಠಾಣೆಯಲ್ಲಿ ಒಟ್ಟು 7 ಪ್ರಕರಣ, ರಾಮಸಿದ್ದ ಗುರುಸಿದ್ದಪ್ಪ ತಪ್ಸಿ ವಿರುದ್ದ ಗೋಕಾಕ ಗ್ರಾಮೀಣ, ಅಂಕಲಗಿ, ಗೋಕಾಕ ನಗರ ಠಾಣೆ ಸೇರಿದಂತೆ ಒಟ್ಟು 6 ಪ್ರಕರಣ ಹಾಗೂ ಬಸವರಾಜ ವಸಂತ ಖಿಲಾರಿ ವಿರುದ್ಧ ಮೂಡಲಗಿ, ಗೋಕಾಕ ನಗರ, ಗೋಕಾಕ ಗ್ರಾಮೀಣ, ಅಂಕಲಗಿ ಠಾಣೆ ಸೇರಿದಂತೆ ಒಟ್ಟು 9 ಪ್ರಕರಣ ದಾಖಲಾಗಿವೆ.