This is the title of the web page
This is the title of the web page

ಜಿಲ್ಲೆಯ ಫಾಲ್ಸ್ ಗಳ ಭೇಟಿಗೆ ನಿರ್ಬಂಧ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಜಿಲ್ಲೆಯ ಫಾಲ್ಸ್ ಗಳ ಭೇಟಿಗೆ ನಿರ್ಬಂಧ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

 

ಬೆಳಗಾವಿ, ಜು.೨೬: ಜಿಲ್ಲೆಯಾದ್ಯಂತ ಹಲವಾರು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ವಾಟರ್ ಫಾಲ್ಸ್ ಗಳ ಸಮೀಪ ಸರ‍್ವಜನಿಕರು ತೆರಳುವುದನ್ನು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಫಾಲ್ಸ್ ಸಮೀಪಕ್ಕೆ ತೆರಳಿದಾಗ ಕಾಲುಜಾರಿ ಬಿದ್ದು ಅನೇಕ ಜನರು ಪ್ರಾಣ ಕಳೆದುಕೊಂಡ ಘಟನೆಗಳು ರಾಜ್ಯದಾದ್ಯಂತ ಸಂಭವಿಸುತ್ತಿರುವುದು ವರದಿಯಾಗಿದೆ.
ಇಂತಹ ದರ‍್ಘಟನೆಗಳನ್ನು ತಪ್ಪಿಸುವ ಉದ್ಧೇಶದಿಂದ ಜಿಲ್ಲೆಯಲ್ಲಿರುವ ಫಾಲ್ಸ್ ಸಮೀಪ ತೆರಳುವುದಕ್ಕೆ ನರ‍್ಬಂಧ ವಿಧಿಸಲಾಗಿದೆ. ಇದಲ್ಲದೇ ಅರಣ್ಯ ಪ್ರದೇಶದಲ್ಲಿರುವ ಫಾಲ್ಸ್ ಗಳಿಗೆ ಯಾವುದೇ ಸರ‍್ವಜನಿಕರು ಭೇಟಿ ನೀಡುವುದನ್ನು ಈಗಾಗಲೇ ನರ‍್ಬಂಧಿಸಲಾಗಿರುತ್ತದೆ.

ಗೋಕಾಕ ಸೇರಿದಂತೆ ಜಿಲ್ಲೆಯ ಕೆಲವು ಪ್ರಸಿದ್ಧ ಫಾಲ್ಸ್ ಗಳನ್ನು ಪ್ರವಾಸಿಗರು ದೂರದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಫಾಲ್ಸ್ ಬಳಿ ನಿಗಾ ವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿ, ಪ್ರವಾಸಿಮಿತ್ರರು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ.
ಫಾಲ್ಸ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕೂಡ ಅಪಾಯಕಾರಿ ಸ್ಥಳಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.