ಕಿಚನ್ ನಲ್ಲಿ ಟಿಕೆಟ್ ಪೈನಲ್ ಆಯ್ತಾ: ಕಾಂಗ್ರೆಸ್ ಟ್ವೀಟ್

ಕಿಚನ್ ನಲ್ಲಿ ಟಿಕೆಟ್ ಪೈನಲ್ ಆಯ್ತಾ: ಕಾಂಗ್ರೆಸ್ ಟ್ವೀಟ್

 

ಬೆಂಗಳೂರು; ಕೇಂದ್ರ ಗೃಹ, ಸಹಕಾರ ಸಚಿವ, ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ ಕರ್ನಾಟಕ ಪ್ರವಾಸದಲ್ಲಿದ್ದಾರೆ.

ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ ಹತ್ತಿರುವಾಗುತ್ತಿರುವ ಹಿನ್ನಲೆಯಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಅಮಿತ್ ಶಾ ಭೇಟಿಯ ವೇಳೆ ಟಿಕೆಟ್ ಫಿಕ್ಸ್ ಆಯಿತಾ? ಎಂದು ಕೇಳಿ ಟ್ವೀಟ್‌ ಮಾಡಿ ಟೀಕೆ ಮಾಡಿದೆ.

ಶುಕ್ರವಾರ ಬೆಳಗ್ಗೆ ಅಮಿತ್ ಶಾ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು, ಉಪಹಾರ ಸವಿದರು. ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಹೂ ಗುಚ್ಛ ನೀಡಿ ಅಮಿತ್ ಶಾ ಸ್ವಾಗತಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ ತನ್ನ ಟ್ವೀಟ್‌ನಲ್ಲಿ, ‘ನಮ್ಮ ಪಕ್ಷದ ಟಿಕೆಟ್ ಕಿಚನ್ನಲ್ಲಿ ತೀರ್ಮಾನ ಆಗಲ್ಲ ಅಂದಿದ್ರಲ್ಲ ಮಾನ್ಯ ಸಿ. ಟಿ. ರವಿ ಅವರೇ ಇದೇನಿದು ನಿಮ್ಮ ಹೇಳಿಕೆಗೆ ವಿರುದ್ಧವಾಗಿ ಆಗ್ತಾ ಇದೆಯಲ್ಲ. ವಿಜಯೇಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಯ್ತಾ? ಯಡಿಯೂರಪ್ಪ ಮತ್ತು ಸಂತೋಷ್ ನಡುವಣ ಮೇಲಾಟದಲ್ಲಿ ಯಾರ ಕೈ ಮೇಲಾಯ್ತು? ಎಲೆಕ್ಷನ್ ಮುಗಿವವರೆಗೆ ‘ಸಂತೋಷ’ ಆಟ ನಡೆಯುವುದಿಲ್ಲ ಅಲ್ಲವೇ?’ ಎಂದು ಕಾಂಗ್ರೆಸ್ ಕೇಳಿದೆ.