ಬೆಳಗಾವಿ: ಬೆಳಗಾವಿಯ ರೇಲ್ವೆ ನಿಲ್ಧಾಣಕ್ಕೆ ಬೆಳಗಾವಿಯ ನಾಗನೂರು ಮಠದ, ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡಲು ಜೀವ ಇರೋವರೆಗೂ ಹೋರಾಡುತ್ತೇನೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ, ಕನ್ನಡಪರ ಹೋರಾಟಗಾರ ರಾಜಕುಮಾರ ಟೋಪಣ್ಣವರ ಸಂಕಲ್ಪ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ಬೆಳಗಾವಿ,ನಾಗನೂರು ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳ,ಅನ್ನ ದಾಸೋಹ,ಅಕ್ಷರ ದಾಸೋಹದಿಂದಾಗಿ,ಲಕ್ಷಾಂತರ ಯುವಕರು ಉನ್ನತ ಶಿಕ್ಷಣ ಪಡೆದು,ಬದುಕು ಕಟ್ಟಿಕೊಂಡಿದ್ದಾರೆ,ಮಹಾಸ್ವಾಮಿಗಳ ಸೇವೆಯನ್ನು ಬೆಳಗಾವಿಯ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ,ಡಾ. ಶಿವಬಸವ ಮಹಾಸ್ವಾಮಿಗಳು ಮಾಡಿರುವ ಕನ್ನಡಪರ ಹೋರಾಟದ ಪರಿಣಾಮವೇ ಬೆಳಗಾವಿ ಕನ್ನಡದ ನೆಲವಾಗಿದೆ ಅವರ ನಿತ್ಯ ಸ್ಮರಣೆ ಬೆಳಗಾವಿಯಲ್ಲಿ ಆಗಬೇಕಾಗಿದೆ ಎಂದು ಟೋಪಣ್ಣವರ ಒತ್ತಾಯಿಸಿದ್ದಾರೆ.
ಬೆಳಗಾವಿಯ ರೇಲ್ವೆ ನಿಲ್ಧಾಣಕ್ಕೆ ಡಾ.ಶಿವಬಸವ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಅನ್ಯಾಯ ಮಾಡಿವೆ. ಮಹಾತ್ಮರ ಸೇವೆ,ಇಂದಿನ ಮುತ್ತು ಮುಂದಿನ ಪೀಳಿಗೆಗೆ ಗೊತ್ತಾಗಬೇಕು,ಅದಕ್ಕಾಗಿ ಅವರ ಹೆಸರನ್ನು ನಾಮಕರಣ ಆಗಲೇಬೇಕು,ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಬೆಳಗಾವಿಯಲ್ಲಿ ನಿರಂತರವಾಗಿ ಹೋರಾಟ ಮಾಡುವದಾಗಿ ಟೋಪಣ್ಣವರ ಭರವಸೆ ನೀಡಿದ್ದಾರೆ.