ಎಳು ವರ್ಷದ ಪುಟಾಣಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್: ಬಾಲಕಿಗೆ ಅಭಿನಂದನಾ ಮಹಾಪೂರ

ಎಳು ವರ್ಷದ ಪುಟಾಣಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್: ಬಾಲಕಿಗೆ ಅಭಿನಂದನಾ ಮಹಾಪೂರ

 

ಬೈಲಹೊಂಗಲ- ಕೇವಲ ಎಳು ವರ್ಷದ ಪುಟಾಣಿ ಬಾಲಕಿ ಕುಮಾರಿ. ಅನ್ವಿತಾ ರವೀಂದ್ರ ಗೋಕಾಕ ಇಂಡಿಯಾ ಬುಕ್ ಆಫ್ ರೆಕಾರ್ಡ್-2023 ಸೇರಿದ್ದಾಳೆ. ಮತ್ತು ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಬೆಳಗಾವಿಯ ಹನುಮಾನ ನಗರದ ರವೀಂದ್ರ ಗೋಕಾಕ ಹಾಗೂ ನಮಿತಾ ಶಿಕ್ಷಕ ದಂಪತಿ ಮಗಳಾದ ಅನ್ವಿತಾ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ.
ಅನ್ವಿತಾಳು ರಸಾಯನ ಶಾಸ್ತ್ರ ವಿಷಯದಲ್ಲಿ ಬರುವ ಮೂಲಧಾತುಗಳ ಹೆಸರುಗಳನ್ನು ಕೇವಲ 58 ಸೆಕೆಂಡುಗಳಲ್ಲಿ ಅರಳು ಹುರಿದಂತೆ ರಸಾಯನಶಾಸ್ರ್ತದ 118 ಮೂಲ ಧಾತುಗಳ ಹೆಸರುಗಳನ್ನು ಪಟ ಪಟನೆ ಹೇಳುತ್ತಾಳೆ. ಇದರ ಜೊತೆ ಅನ್ವಿತಾಳಿಗೆ ಡ್ರೈಯಿಂಗ, ಪೇಂಟಿಂಗ ಹಾಗೂ ಸಂಗೀತ ಕಡೆ ಹೆಚ್ಚು ಒಲವು ಇದೆಯಂತೆ. ಮುಂದೆ ಇವಳು ಇಂಜನೀಯರ ಆಗಬೇಕೆಂಬ ಆಸೆ ಹೊಂದಿದ್ದಾಳೆ ಅಲ್ಲದೇ ಜೀವನದಲ್ಲಿ ಹೊಸ ಸಾಧನೆ ಮಾಡಬೇಕೆಂಬ ಬಯಕೆ ಇವಳ ಮುತ್ತಿನಂತ ಮಾತುಗಳಿಂದ ಹೊರಬರುತ್ತಿದೆ. ಇದಕ್ಕೆಲ್ಲ ಪ್ರೇರಣೆ ನನ್ನ ತಂದೆ ಮತ್ತು ತಾಯಿ ಎನ್ನುತಾಳೆ.
ಅವಳ ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿ ಮನಗಂಡು ಇಂಡಿಯಾ ಬುಕ್ ಅಫ್ ರೆಕಾಡ್ರ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಗಮನಿಸಿ ಈ ಸಂಸ್ಥೆ ಪ್ರಶಸ್ತಿ ನೀಡಿ ಬಂಗಾರದ ಪದಕ, ಐಡಿ ಕಾರ್ಡ, ಪ್ರಮಾಣ ಪತ್ರ, ಪೆನ್, ಬ್ಯಾಚ್ ನೀಡಿ ಗೌರವಿಸಿದ್ದಾರೆ.
ಅನ್ವಿತಾ ಬೆಳಗಾವಿ ಸೆಂಟ್ ಜೊಸೆಫ್ ಆಂಗ್ಲ ಮಾದ್ಯಮ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ಬೈಲಹೊಂಗಲ ಪಟ್ಟಣದ ನಿವೃತ್ತ ಶಿಕ್ಷಕ ಎಂ.ಎಂ.ಕೋಲಕಾರ ಮತ್ತು ಮುಖ್ಯ ಶಿಕ್ಷಕಿಯಾದ ಸುಮಿತ್ರಾ ಮೇಗೇರಿ ಇವರ ಮೊಮ್ಮಳಲಾಗಿದ್ದು ಹೆಮ್ಮೆಯ ಸಂಗತಿ.