ಗೋಕಾಕ-ಸಂಘಗಳು ಸಾಮಾಜಿಕ ಸಂಘಟನೆ, ಚಿಂತನೆ, ತಿಳುವಳಿಕೆ ನೀಡುವ ಕಾರ್ಯ ಮಾಡುತ್ತವೆ ಎಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ಹೇಳಿದರು.
ಅವರು ಗೋಕಾಕದ ಸರಕಾರಿ ಪದವಿ ಪೂರ್ವಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಗೋಕಾಕ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ವಾಟ್ಸಾಪ್, ಪೆಸ್ ಬುಕ್ ಹಾವಳಿಯಿಂದ ಹಾಳಾಗುತ್ತಿದ್ದಾರೆ.ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಸಾಹಿತಿಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದಾರೆ.ಮಕ್ಕಳು ಮನುಕುಲದ ಆಶಾಕಿರಣವಾಗಿದ್ದು ಮಕ್ಕಳ ಸಾಹಿತ್ಯದ ಬಗ್ಗೆ ಅವರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
ಇದೇ ವೇಳೆ ನೇಸರಗಿ ಪತ್ರಕರ್ತ ಸಿ.ವಾಯ.ಮೆಣಸಿನಕಾಯಿಯವರು ರಚಿಸಿದ ಕೃತಿಗಳಾದ
*ವಿಚಾರವಾಣಿ ಮತ್ತು ಕರುಣೆಯ ತೋಟ* ಇವುಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಸಾಹಿತಿಗಳಾದ ಶ್ರೀಮತಿ ಸುಗಂದಾ ಡಂಬಳ, ಶಂಕರ ಕ್ಯಾಸ್ತಿ ಅವರಿಗೆ ಮಕ್ಕಳ ಮಂದಾರ ಜಿಲ್ಲಾ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ, ಹಿರಿಯ ಸಾಹಿತಿ ಈಶ್ವರಚಂದ್ರ ಬೆಟಗೇರಿ, ಅಕ್ಷರದಾಸೋಹ ಸಹಾಯಕ ನಿರ್ದೆಶಕ ಅಶೋಕ ಮಲಬನ್ನವರ, ಗೋಕಾಕ ಸಿಡಿಪಿಓ ಡಿ.ಎಸ್.ಕುಡವಕ್ಕಲಗಿ, ಸರಕಾರಿ ಪ.ಪೂ ಮಹಾವಿದ್ಯಾಲಯ ಉಪಪ್ರಾಚಾರ್ಯ ಎಂ.ಬಿ.ಬಳಗಾರ, ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಜಯಾನಂದ ಮಾದಾರ,ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ರಾಮ ನಿಲಜಗಿ, ಡಾ.ಲಕ್ಷ್ಮಣ ಚೌರಿ, ಪ್ರಕಾಶ ಹೊಸಮನಿ, ಮಕ್ಕಳ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಈಶ್ವರ ಮಮದಾಪೂರ,ಉಪಾಧ್ಯಕ್ಷೆ ಡಾ.ಸುನಂದಾ ಮಾದಾರ, ಕಾರ್ಯದರ್ಶಿ ಆನಂದ ಸೋರಗಾವಿ, ಪತ್ರಕರ್ತ ವೀರೆಂದ್ರ ಪದಕಿ,ಇನ್ನಿತರರು ಇದ್ದರು.
ಇದೇ ವೇಳೆ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ತಾಲೂಕಾ ಘಟಕದ ಅಧ್ಯಕ್ಷರಿಗೆ ನೇಮಕ ಆದೇಶ ಪತ್ರಗಳನ್ನು ಜಿಲ್ಲಾಧ್ಯಕ್ಷ ಸಿದ್ರಾಮ ನಿಲಜಗಿ ನೀಡಿದರು.