: ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರೆ ಅಂಗವಾಗಿ ಶನಿವಾರ ರಥೋತ್ಸವ ಅದ್ದೂರಿಯಿಂದ ಜರುಗಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯರಗೊಪ್ಪದ ಲೀಲಾಮಠದ ಶ್ರೀ ನಿತ್ಯಾನಂದ ಸ್ವಾಮೀಜಿ ವಹಿಸಿದ್ದರು. ಕಳೆದ ಆರುದಿನಗಳಿಂದ ನಡೆದ ಜಾತಾಮಹೋತ್ಸವ ಕೊನೆಯ ದಿನ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದೇ ಮಾತನಾಡಿದ ಶ್ರೀ ನಿತ್ಯಾನಂದ ಸ್ವಾಮೀಜಿ ಅವರು, ನಾಡಿನಲ್ಲಿ ಅಧರ್ಮದ ಅಟ್ಟಹಾಸ ಮೆರೆಯುವಂತ ಹಂತಕ್ಕೆ ತಲುಪಿದೆ. ಆದ್ದರಿಂದ ನಾವೇಲ್ಲರೂ ಧರ್ಮದ ಹಾದಿಯಲ್ಲಿ ನಡೆದು ಅಧರ್ಮದ ಅಟ್ಟಹಾಸವನ್ನು ಮೆಟ್ಟಿನಿಲ್ಲಬೇಕಿದೆ. ಇಂದು ನಮ್ಮ ಸಂಪ್ರದಾಯಗಳು ನಶಿಸಿ ಹೋಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಆಚರಣೆಗಳಿಂದ ತಲೆ ತಲಾಂತರ ಬಂದಂತಹ ಸಂಪ್ರದಾಯಗಳು ಉಳಿದಿವೆ. ಆದ್ದರಿಂದ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯನ್ನು ಕಡೆಗಣಿಸಿ, ನಮ್ಮ ಸನಾತನ ಹಾಗೂ ಗ್ರಾಮೀಣ ಸೊಗುಡಿನ ಸಂಪ್ರಾಯವನ್ನು ಆಚರಸಿಬೇಕು. ಅಂದಾಗ ಮಾತ್ರ ನಮ್ಮ ಮೂಲ ಸಂಪ್ರದಾಯ ಬದುಕುಳಿದು ಮುಂದಿನ ಪೀಳಿಗೆಗೆ ಪರಿಚಯವಾಗಲಿದೆ ಎಂದರು.
ರಥೋತ್ಸವ ಆರಂಭದ ವೇಳೆ ಯುವಕರು ಹಾಗೂ ಗ್ರಾಮಸ್ಥರಿಂದ ಉದ್ಘೋಷಗಳು ಮೊಳಗಿದವು. ರಥೋತ್ಸವದ ಮಾರ್ಗದುದ್ದಕ್ಕೂ ಯುವಕರು ಪರಸ್ಪರ ಕೇಸರಿ ಎರಚಿ ಸಂಭ್ರಮಿಸಿದರು. ಈ ವೇಳೆ ನಾವಲಗಟ್ಟಿ, ತಿಗಡಿ, ಗಿರಿಯಾಲ, ಹಿರೇಮೇಳೆ, ಪುಲಾರಕೊಪ್ಪ, ಶಿಗಿಹಳ್ಳಿ, ಮರಿಕಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಹಿಸಿದ್ದರು.
————-