ಬಿಜೆಪಿ ಅಭ್ಯರ್ಥಿ ರವಿ ಪಾಟೀಲ ಪರ ಪ್ರಚಾರ ನಡೆಸಿಲ್ಲ.ಪ್ರಚಾರದಿಂದ ದೂರ ಉಳಿದ ಸ್ಥಳೀಯ ಬಿಜೆಪಿ ನಾಯಕರು ..?

ಬಿಜೆಪಿ ಅಭ್ಯರ್ಥಿ ರವಿ ಪಾಟೀಲ ಪರ ಪ್ರಚಾರ ನಡೆಸಿಲ್ಲ.ಪ್ರಚಾರದಿಂದ ದೂರ ಉಳಿದ ಸ್ಥಳೀಯ ಬಿಜೆಪಿ ನಾಯಕರು ..?

 

ಚವ್ಹಾಟಗಲ್ಲಿ, ಕಾಕತಿವೇಸ್, ಗಣಪತಿಗಲ್ಲಿ ಹಾಗೂ ಇತರೆ ಮರಾಠಿ ಭಾಷಿಕ ಇರುವ ಕ್ಷೇತ್ರದಲ್ಲಿ ರವಿ ಪಾಟೀಲ ವಿರುದ್ಧ ನಾಮಫಲಕ ಬರೆದು ಜನಾಕ್ರೋಶ ವ್ಯಾಪಕವಾಗಿ ಬರುತ್ತಿವೆ‌.

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಲಿಂಗಾಯತ ಸಮಾಜದ ನಾಯಕರಿಗೆ ಟಿಕೆಟ ನೀಡಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬೆಳಗಾವಿ ರವಿ ಪಾಟೀಲ್ ಟಿಕೆಟ್ ನೀಡಿದೆ ಎಂದು ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಡಾ. ರವಿ ಪಾಟೀಲ ವಿರುದ್ಧ ಲೇವಡಿ ಮಾಡುತ್ತಿದ್ದಾರೆ.

ಡಾ. ರವಿ ಪಾಟೀಲ ಕಾರ್ಯಕರ್ತರ ನಡುವೆ ಸರಿಯಾದ ಸಂಬಂಧ ಇಲ್ಲ. ಪಕ್ಷಕ್ಕಾಗಿ ದುಡಿದ ಉದಾರಣೆ ಇಲ್ಲವೇ ಇಲ್ಲ. ಚುನಾವಣೆಗೆ ಬಂದಾಗ ಮಾತ್ರ ಉದಯವಾಗುವ ರವಿ ಈ ಸಲ ಅನಿಲ್ ಬೆನಕೆಗೆ ಟಿಕೆಟ್ ತಪ್ಪಿಸಿ ಹೈಕಮಾಂಡ್ ಮೇಲೆ ಯಾವ ಪ್ರಭಾವ ಬೀರಿ ಟಿಕೆಟ್ ಪಡೆದುಕೊಂಡು ಬಂದರೋ ಎನ್ನುವ ಚರ್ಚೆ ಬಿಜೆಪಿ ಕಾರ್ಯಕರ್ತರಲ್ಲಿ ನಡೆದಿದೆ.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರವಿ ಉದಯಿಸುವ ದಿಕ್ಕು ಯಾವುದು, ಕ್ಷೇತ್ರದ ವಿಸ್ತೀರ್ಣ ಬಗ್ಗೆ ಮಾಹಿತಿ ಇಲ್ಲದ, ಸರ್ವೇ ಪಟ್ಟಿಯಲ್ಲಿ ಮಂಚೂಣಿಯಲ್ಲಿರದ ರವಿ ಪಾಟೀಲ ಟಿಕೆಟ್ ಪಡೆದಿದ್ದು ಬಿಜೆಪಿಯಲ್ಲಿಯಿ ದಿಗ್ಬರ್ಮೆ ಮೂಡಿಸಿದೆ.

ಕಾರ್ಯಕರ್ತರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಉತ್ತರ ಮತಕ್ಷೇತ್ರದಲ್ಲಿ ಆಯ್ಕೆ ಮಾಡಿರುವ ಅಭ್ಯರ್ಥಿಯ ಬಗ್ಗೆ ಗ್ರೌಡ್ ರಿಯಾಲಿಟಿಯಲ್ಲಿ ಜನರಿಗೆ ರವಿ ಪಾಟೀಲ ಮುಖ ಪರಿಚಯವೇ ಇಲ್ಲ. ಇವರಿಗೆ ಟಿಕೆಟ್ ನೀಡಿದ್ದು ಚವ್ಹಾಟಗಲ್ಲಿ, ಕಾಕತಿವೇಸ್, ಗಣಪತಿಗಲ್ಲಿ ಹಾಗೂ ಇತರೆ ಮರಾಠಿ ಭಾಷಿಕ ಇರುವ ಕ್ಷೇತ್ರದಲ್ಲಿ ರವಿ ಪಾಟೀಲ ವಿರುದ್ಧ ನಾಮಫಲಕ ಬರೆದು ಜನಾಕ್ರೋಶ ವ್ಯಾಪಕವಾಗಿ ಬರುತ್ತಿವೆ‌.
ರವಿ ಪಾಟೀಲ ನೇರವಾಗಿ ಹೈಕಮಾಂಡ್ ನಿಂದ ಟಿಕೆಟ್ ಪಡೆದುಕೊಂಡು ಬಂದಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಂಘ ಪರಿವಾರದವರಾರೂ ರವಿ ಪಾಟೀಲ ಪರ ಪ್ರಚಾರ ನಡೆಸಿಲ್ಲ. ಸ್ಥಳೀಯ ಬಿಜೆಪಿ ನಾಯಕರು ಪ್ರಚಾರದಿಂದ ದೂರ ಸರಿದಿದ್ದಾರೆ. ಬೆಳಗಾವಿ ಉತ್ತರದಲ್ಲಿ ಬಿಜೆಪಿ ಟಿಕೆಟ್ ಪಪ್ಪುವಿಗೆ ನೀಡಿದೆ ಎಂದು ಬಿಜೆಪಿ ಕಾರ್ಯಕರ್ತರು ಲೇವಡಿ ಮಾಡುತ್ತಿದ್ದಾರೆ.