ಬೆಳಗಾವಿ : ಸಿಡಿಲು ಬಡಿದು ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ಘಟನೆ ನಡೆದ ಕೇವಲ 20 ಗಂಟೆಯೊಳಗೆ ಅಥಣಿ ತಹಶೀಲ್ದಾರರು 5 ಲಕ್ಷ ರು. ಪರಿಹಾರ ನೀಡಿದ್ದಾರೆ.
ಮಂಗಳವಾರ ಸುರಿದ ಧಾರಾಕಾರ ಮಳೆಯ ಸಂದರ್ಭದಲ್ಲಿ ಕುರಿ ಕಾಯುತ್ತಿದ್ದ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಬಾವನದಡ್ಡಿ ಮಜರೆ ಗ್ರಾಮದ ನಿವಾಸಿ ಅಮುಲ ಜಯಸಿಂಗ ಕಾನಡೆ (25) ಎಂಬುವನಿಗೆ ಸಿಡಿಲು ಬಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರ ನಿರ್ದೇಶನದಂತೆ ಘಟನೆ ನಡೆದ ಕೇವಲ 20 ಗಂಟೆಗಳಲ್ಲಿ ಮೃತ ಅಮುಲ ಕಾನಡೆನ ತಂದೆ ಜಯಸಿಂಗ್ ಕಾನಡೆ ಅವರಿಗೆ ಪ್ರಕೃತಿ ವಿಕೋಪದ ಮಾರ್ಗಸೂಚಿಯನ್ವಯ 5 ಲಕ್ಷ ರು ಪರಿಹಾರವನ್ನು ನೀಡಿದ್ದಾರೆ.