This is the title of the web page
This is the title of the web page

ಸಚಿವ ನಿತಿನ್ ಗಡ್ಕರಿ ಬೆದರಿಕೆಕರೆ: ಆರೋಪಿ ಹಿಂಡಲಗಾ ಜೈಲಿನಿಂದ ಮಹಾರಾಷ್ಟ್ರಕ್ಕೆ ಶಿಪ್ಟ್‌

ಸಚಿವ ನಿತಿನ್ ಗಡ್ಕರಿ ಬೆದರಿಕೆಕರೆ: ಆರೋಪಿ ಹಿಂಡಲಗಾ ಜೈಲಿನಿಂದ ಮಹಾರಾಷ್ಟ್ರಕ್ಕೆ ಶಿಪ್ಟ್‌

 

ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಯನ್ನ ಹಿಂಡಲಗಾ ಜೈಲಿನಿಂದ ಮಹಾರಾಷ್ಟ್ರಕ್ಕೆ ಶಿಪ್ಟ್‌ ಮಾಡಲಾಗಿದೆ.

ಆರೋಪಿಯಾದ ಜಯೇಶ್ ಕಾಂತ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ನಾಗ್ಪುರ ಪೊಲೀಸರು ಕರೆದೊಯ್ದಿದ್ದಾರೆ.

ಮಂಗಳೂರಿನ ಜೋಡಿ ಕೊಲೆ ಪ್ರಕರಣದ ಆರೋಪಿ ಪೂಜಾರಿ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದು, ಕಿಡಿಗೇಡಿ ಮಾಡಿ ಕೇಂದ್ರ ಸಚಿವ ಗಡ್ಕರಿ 100 ಕೋಟಿ ರೂ. ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಗ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಸದ್ಯ ಆರೋಪಿಯನ್ನು ನಾಗ್ಪುರ ಪೊಲೀಸ್ ಕರೆದುಕೊಂಡು ಹೋಗಿದ್ದಾರೆ.