ದೆಹಲಿ : ಬಿಜೆಪಿ ವಿರುದ್ಧ ಸುಪ್ರೀಂ ಕೋರ್ಟ್ನಿಂದ ಉನ್ನತ ಮಟ್ಟದ ತನಿಖೆ ನಡೆಸಿ ಬಿಜೆಪಿ ವಿರುದ್ಧ ಸುಪ್ರೀಂ ಕೋರ್ಟ್ನಿಂದ ಉನ್ನತ ಮಟ್ಟದ ತನಿಖೆ ನಡೆಸಿ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು.ಚುನಾವಣೆ ಬಾಂಡ್ಗಳ ಯೋಜನೆಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಆಡಳಿತಾರೂಢ ಬಿಜೆಪಿ ವಿರುದ್ಧ ಸುಪ್ರೀಂ ಕೋರ್ಟ್ನಿಂದ ಉನ್ನತ ಮಟ್ಟದ ತನಿಖೆ ನಡೆಸಿ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ.
ಬಾಂಡ್ಗಳ ಮೂಲಕ ಪಡೆದ ಶೇಕಡಾ 50 ರಷ್ಟು ಹಣ ಬಿಜೆಪಿಗೆ ಸಿಕ್ಕಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ದತ್ತಾಂಶವು ಬಿಜೆಪಿಯ ಕ್ವಿಡ್ ಪ್ರೊ ಕ್ವೋ, ದೇಣಿಗೆಗಳ ವಿರುದ್ಧ ಕಂಪನಿಗಳಿಗೆ ರಕ್ಷಣೆ ನೀಡುವುದು, ಕಿಕ್ಬ್ಯಾಕ್ಗಳು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ವರ್ಗಾವಣೆಯಂತಹ ಭ್ರಷ್ಟ ತಂತ್ರಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಚುನಾವಣ ಬಾಂಡ್ ಯೋಜನೆಗೆ ಸಂಬಂಧಿಸಿದ ಮಾಹಿತಿ ಬಹಿರಂಗಗೊಂಡ ಒಂದು ದಿನದ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನಿ ಮೋದಿ ಅವರು ‘ನಾ ಖಾವುಂಗಾ , ನಾ ಖಾನೆ ದೂಂಗಾ’ ಎಂದು ಹೇಳುತ್ತಾರೆ, ಆದರೆ ಅವರು ‘ಸಿರ್ಫ್ ಬಿಜೆಪಿ ಕೊ ಖಿಲಾವುಂಗಾ’ ಎನ್ನುವುದನ್ನು ಮಾತ್ರ ಅರ್ಥೈಸಿಕೊಂಡಿದ್ದಾರೆಂದು ತೋರುತ್ತದೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಡೇಟಾ ಒಟ್ಟು ಚುನಾವಣ ಬಾಂಡ್ಗಳ ಹಣದ ಸುಮಾರು 50 ಪ್ರತಿಶತದಷ್ಟು ಹಣವನ್ನು ಬಿಜೆಪಿ ಪಡೆದುಕೊಂಡಿದೆ, ವಿಪಕ್ಷ ಕಾಂಗ್ರೆಸ್ ಕೇವಲ 11 ಪ್ರತಿಶತದಷ್ಟು ಹಣವನ್ನು ಪಡೆದುಕೊಂಡಿದೆ ಎಂದು ತೋರಿಸುತ್ತಿದೆ.