This is the title of the web page
This is the title of the web page

ಉತ್ತರ ಪ್ರದೇಶ: 2027 ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲ್ಲ: ಬಿಜೆಪಿ ಶಾಸಕ ರಮೇಶ್ ಚಂದ್ರ ಮಿಶ್ರಾ ಹೇಳಿಕೆ 

ಉತ್ತರ ಪ್ರದೇಶ: 2027 ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲ್ಲ: ಬಿಜೆಪಿ ಶಾಸಕ ರಮೇಶ್ ಚಂದ್ರ ಮಿಶ್ರಾ ಹೇಳಿಕೆ 

 

ಲಖನೌ:ಉತ್ತರ ಪ್ರದೇಶದಲ್ಲಿಸದ್ಯ ಪಕ್ಷದ ಸ್ಥಿತಿ ಅತಂತ್ರವಾಗಿದೆ 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸೋಲು ರಾಜ್ಯದ ಕೆಲವು ಹಿರಿಯ ನಾಯಕರನ್ನು ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ. ಇದು 2027 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಿಡಿಕಾರಿರುವ ಬದ್ಲಾಪುರ ಬಿಜೆಪಿ ಶಾಸಕ ರಮೇಶ್ ಚಂದ್ರ ಮಿಶ್ರಾ ಅವರ ಮಾತುಗಳಲ್ಲಿ ಪ್ರತಿಧ್ವನಿಸಿದೆ.

ಉತ್ತರ ಪ್ರದೇಶದಲ್ಲಿಸದ್ಯ ಪಕ್ಷದ ಸ್ಥಿತಿ ಅತಂತ್ರವಾಗಿದೆ. 2027ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಯುವ ಭೀತಿ ಎದುರಿಸುತ್ತಿದೆ ಎಂದು ಎರಡು ಬಾರಿಯ ಬಿಜೆಪಿ ಶಾಸಕ ಮಿಶ್ರಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯದಲ್ಲಿ ಪಕ್ಷ ಬಲಪಡಿಸಲು ರಾಷ್ಟ್ರೀಯ ನಾಯಕತ್ವ ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ