ಕಾಯಕಯೋಗಿ, ಕರ್ಮಯೋಗಿ, ಶೀವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಬೆಳಗಾವಿ ಜಿಲ್ಲಾ ವಡ್ಡರ ಸಮಾಜದ ಮುಖಂಡರ ಆಗ್ರಹ

ಕಾಯಕಯೋಗಿ, ಕರ್ಮಯೋಗಿ, ಶೀವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಬೆಳಗಾವಿ ಜಿಲ್ಲಾ ವಡ್ಡರ ಸಮಾಜದ ಮುಖಂಡರ ಆಗ್ರಹ

 

ಬೆಳಗಾವಿ .   ರಾಜ್ಯ ಸರಕಾರ ಪ್ರತಿ ವರ್ಷ ಕಾಯಕಯೋಗಿ, ಕರ್ಮಯೋಗಿ, ಶೀವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಿ ಆಯಾ ಜಿಲ್ಲಾಗಳಿಗೆ ಮತ್ತು ಇಲಾಖೆಗಳಿಗೆ ರಾಜ್ಯ ಸರಕಾರ ಜಯಂತಿಯನ್ನು ಮಾಡಲು ಆದೇಶ ಮಾಡಿದ್ದು ಇರುತ್ತದೆ. ಆ ಪ್ರಕಾರ ದಿನಾಂಕ 14/01/2026 ರಂದು ರಾಜ್ಯ ಸರಕಾರ ಆದೇಶಮಾಡಿದ್ದು ಆ ಪ್ರಕಾರ ನಮ್ಮ ಜಿಲ್ಲೆಯಲ್ಲಿ ಕೂಡಾ ಜಯಂತಿಯನ್ನು ಮಾಡಲು ಆದೇಶ ಮಾಡಿದ್ದು ಇರುತ್ತದೆ.

ಆದರೆ, ಜಿಲ್ಲೆಯಲ್ಲಿ ಕೆಲವು ಇಲಾಖೆಗಳಲ್ಲಿ ಜಯಂತಿಯನ್ನು ಆಚರಿಸಬೇಕಾಗಿತ್ತು ಆದರೆ ಇಲಾಖಾ ಮುಖ್ಯಸ್ಥರು ಆಚರಿಸದೇ ಕಾಯಕಯೋಗಿ, ಕರ್ಮಯೋಗಿ, ಶೀವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡದೇ ಸರಕಾರದ ಆದೇಶವು ಉಲ್ಲಂಘಣೆ ಮಾಡಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಕಾರ್ಯಕ್ರಮವನ್ನು ಉಲ್ಲಂಘಿಸುವ ಬದಲಿ ಕಾಯಕಯೋಗಿ, ಕರ್ಮಯೋಗಿ, ಶೀವಯೋಗಿ ಶ್ರೀ ಸಿದ್ದರಾಮೇಶ್ವರರಿಗೆ ಅಪಮಾನ ಮಾಡಿದ್ದಾರೆ. ಕಾರಣ ಶ್ರೀ ಸಿದ್ದರಾಮೇಶ್ವರರನ್ನು ವಡ್ಡರ ಜನಾಂಗ ಆರಾದಿಸುತ್ತದೆ ಎಂಬ ಸಣ್ಣತನಕ್ಕೆ ಅಧಿಕಾರಿಗಳು ಜಯಂತಿಯನ್ನು ಆಚರಣೆ ಮಾಡದೇ ಇರುವದು ಕಂಡು ಬರುತ್ತದೆ.

ಆದ್ದರಿಂದ ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೆನಂದರೆ ತಕ್ಷಣವೇ ಕಾಯಕಯೋಗಿ, ಕರ್ಮಯೋಗಿ, ಶೀವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸದ ಅಧಿಕಾರಿಗಳ ಮೇಲೆ ಕ್ರಮತಗದುಕೊಳ್ಳಬೇಕು. ಒಂದೊಮ್ಮೆ ತಾವುಗಳ ಅಂತಹ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕ್ರಮ ತಗದುಕೊಳ್ಳದಿದ್ದಲ್ಲಿ ಜಯಂತಿಯನ್ನು ಆಚರಣೆ ಮಾಡದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅಂತಹ ಅಧಿಕಾರಿಗಳಿಗೆ ಕಪ್ಪು ಮಸಿ[ಶಾಯಿ] ಗೊಚ್ಚುವ ಮೂಲಕ ಸಾಂಕೇತಿಕ ಪ್ರತಭಟಣೆಯನ್ನು ಮಾಡಿ ಇದನ್ನೇ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದುಬೆಳಗಾವಿ ಜಿಲ್ಲಾ ವಡ್ಡರ ಸಮಾಜದ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ