PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

*ಗೋಕರ್ಣ ಮಹಾಬಲೇಶ್ವರ:ಶಿವರಾತ್ರಿ ನಿಮಿತ್ತ ಡಾ. ಪ್ರಭಾಕರ್ ಕೋರೆ ದರ್ಶನ**

 

ಗೋಕರ್ಣ 15 ಫೆಬ್ರವರಿ: ಶಿವರಾತ್ರಿ ಭಾರತೀಯ ಪರಂಪರೆಯ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಶಿವನ ಆರಾಧನೆ ಮೂಲಕ ಆತ್ಮಶಾಂತಿಯನ್ನ ಹೊಂದುವುದು ಶಿವರಾತ್ರಿಯ ವೈಶಿಷ್ಟ ವಾಗಿದೆ. ಅದರಲ್ಲಿಯೂ ಗೋಕರ್ಣ ಅನಾದಿ ಕಾಲದಿಂದಲೂ ಶೈವ ಪರಂಪರೆಯ ಮಹತ್ವ ಕೇಂದ್ರವಾಗಿದ್ದು ಶಿವ ಭಕ್ತಿಗೆ ವ್ಯಾಖ್ಯಾನವಾಗಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ ಪ್ರಭಾಕರ ಕೋರೆ ಅವರು ಹೇಳಿದರು.
ಅವರು ಗೋಕರ್ಣದಲ್ಲಿ ಮಹಾಬಲೇಶ್ವರ ಆತ್ಮಲಿಂಗದ ದರ್ಶನ ಮಾಡಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ತಂದೆಯವರ ಕಾಲ ದಿಂದಲೂ ಇಂದಿಗೂ ಪ್ರತಿ ವರ್ಷ ಗೋಕರ್ಣಕ್ಕೆ ಬಂದು ಶಿವ ದರ್ಶನವನ್ನು ಮಾಡಿಕೊಂಡು ಪೂಜೆಯನ್ನು ಸಲ್ಲಿಸುತ್ತೇವೆ. ಇಲ್ಲಿ ಬಂದರೆ ಮನಸ್ಸಿಗೆ ನೆಮ್ಮದಿ ಹಾಗೂ ಆನಂದವನ್ನು ನೀಡುತ್ತದೆ. ಶಿವ ಭಕ್ತಿಯ ಪಾರಮ್ಯದಿಂದಲೇ ಅಂಕಲಿಯಲ್ಲಿ ಅದ್ಭುತವಾದ ಶಿವಮಂದಿರವನ್ನು ನಿರ್ಮಾಣ ಮಾಡಲಾಗಿದ್ದು ವಿಶೇಷ. ಇಂಥ ಪರಮಾತ್ಮನ ಧ್ಯಾನವು ಜೀವನಕ್ಕೆ ಶಕ್ತಿ ಹಾಗೂ ಸಮಾಧಾನವನ್ನು ಕರುಣಿಸುತ್ತದೆ. ಗೋಕರ್ಣ ದರ್ಶನ ನನಗೆ ಪ್ರತಿಸಲ ಹೊಸ ಅನುಭೂತಿಯನ್ನು ನೀಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ವಿರ್ಗಿ, ಅನಿಲ್ ಬಾಗಿ, ಭರತ ಭಣವನೆ , ಅಜಿತ ದೇಸಾಯಿ, ವಿಜಯ್ ಜಾದವ್, ಅಶೋಕ್ ಘೋರ್ಪಡೆ , ಸುರೇಶ್ ಪಾಟೀಲ್ ಹಾಗೂ ದೇವಾಲಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.