ಬೆಳಗಾವಿ ಸುವರ್ಣ ವಿಧಾನಸೌಧ ಡಿ.16 : ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದವರೆಗೆ ರಾಜ್ಯಾದ್ಯಂತ ಒಟ್ಟು 2,134 ಧೃಡೀಕೃತ ಇಲಿ ಜ್ವರ ಪ್ರಕರಣಗಳು ವರದಿಯಾಗಿದ್ದು ಕಳೆದ ಸಾಲಿನಲ್ಲಿ (2024ರ) ಇದೇ ಅವಧಿಯಲ್ಲಿ 2,164 ಧೃಡೀಕೃತ ಪ್ರಕರಣಗಳು ವರದಿಯಾಗಿರುತ್ತವೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ.1 ರಷ್ಟು ಪ್ರಕರಣಗಳು ಕಡಿಮೆಯಾಗಿದ್ದು, ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ವಿಧಾನ ಪರಿಷತ್‍ನಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಅದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರಕರಣಗಳು ಏರಿಕೆಯಾಗಿರುತ್ತದೆ ಎಂದರು
ಇಲಿ ಜ್ವರ ರೋಗದ ನಿರ್ದಿಷ್ಟ ಮತ್ತು ಆರಂಭಿಕ ಪತ್ತೆಗಾಗಿ ದ. ಕನ್ನಡ ಜಿಲ್ಲೆಯ ಜಿಲ್ಲಾ ಸಾರ್ವಜನಿಕ ಅರೋಗ್ಯ ಪ್ರಯೋಗಾಲಯವನ್ನು, “ಪ್ರಾದೇಶಿಕ ಲೆಪೆÇ್ರೀಸ್ಪೆರಾ ಪ್ರಯೋಗಾಲಯ” ಎಂದು ಎನ್.ಸಿ.ಡಿ.ಸಿ. ದೆಹಲಿ, ಕೇಂದ್ರ ಸರ್ಕಾರ, ಇವರು ಗುರುತಿಸಿ, ಈ ಪ್ರಯೋಗಾಲಯದಲ್ಲಿ ಎಲೈಸಾ ಆಧಾರಿತ IgM, ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜೊತೆಗೆSerological analysis ಗಾಗಿ ಉನ್ನತ ಪರೀಕ್ಷೆಯಾದ MAT (Microscopic agglutination test) IgG ಪರೀಕ್ಷೆಗಳನ್ನೂ ಸಹ ಮಾಡಲಾಗುತ್ತಿದೆ.
ಈ ಪ್ರಯೋಗಾಲಯವು ಪ್ರಾದೇಶಿಕ ಪ್ರಯೋಗಾಲಯವಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಿಂದ ಲೆಪೆÇ್ಪೀ ಸ್ಪೇರೋಸಿಸ್ Seಡಿoಟogiಛಿಚಿಟ ಮಾದರಿಗಳನ್ನು ಸ್ವೀಕರಿಸಿ, ಅವುಗಳನ್ನೂ ಸಹ ಪರೀಕ್ಷಿಸಲಾಗುತ್ತಿದೆ.
ಪರೀಕ್ಷೆಗಾಗಿ ಅಗತ್ಯವಿರುವ ಎಲೈಸಾ ಮತ್ತು ಒಂಖಿ ಕಿಟ್ಟುಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ಕಿಟ್ಟುಗಳ ಕೊರತೆಯಾಗದಂತೆ ಕ್ರಮವಹಿಸಲಾಗಿದೆ.
ಇಲಿ ಜ್ವರಕ್ಕೆ ರೋಗ ಲಕ್ಷಣಗಳಿಗೆ ಅನುಗುಣವಾಗಿ ಆoxಥಿಛಿಥಿಛಿಟiಟಿe ಔಷಧಿಯನ್ನು ಶಿμÁ್ಟಚಾರದಂತೆ (Treatment protocol)ನೀಡಲಾಗುತ್ತಿದೆ ಹಾಗೂ ಸದರಿ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇಡಲಾಗಿದ್ದು ಔಷಧಿ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.



























