This is the title of the web page
This is the title of the web page

ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯ ವಿರುದ್ಧ ಬೃಹತ್ ಪ್ರತಿಭಟನೆ  : ಡಾ.ಬಾಬಾ ಅಧವ್

ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯ ವಿರುದ್ಧ ಬೃಹತ್ ಪ್ರತಿಭಟನೆ  : ಡಾ.ಬಾಬಾ ಅಧವ್

 

ಮುಂಬೈ: ಮಹಾ ಚುನಾವಣೆ: ಇವಿಎಂಗಳಿಗೆ ಅಕ್ರಮವಾಗಿ ಮತಗಳ ಸೇರಿಸಿರುವುದು ಸತ್ಯ: ಶರದ್ ಪವಾರ ವಿಎಂಗಳಿಗೆ ಅಕ್ರಮವಾಗಿ ಮತಗಳನ್ನು ಸೇರಿಸಿರುವ ವಿರುದ್ಧ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ನಿವಾಸವಾದ ಫುಲೆ ವಾಡಾದಲ್ಲಿ ತಮ್ಮ ಮೂರು ದಿನಗಳ ಪ್ರತಿಭಟನೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಇಡೀ ಚುನಾವಣಾ ಕಾರ್ಯವಿಧಾನವನ್ನು ನಿಯಂತ್ರಿಸಲು ಅಧಿಕಾರ ಮತ್ತು ಹಣದ ದುರುಪಯೋಗವಾಗಿದೆ ಎಂದು ಶನಿವಾರ ಪ್ರತಿಪಾದಿಸಿದ ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರು, ಹಿಂದೆಂದೂ ನಡೆಯದಂತಹ ಅಕ್ರಮಗಳಿಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕಾರ್ಯಕರ್ತ ಡಾ.ಬಾಬಾ ಅಧವ್ ಅವರನ್ನು ಭೇಟಿ ಮಾಡಿದ ಬಳಿಕ ಶರದ್ ಪವಾರ್ ಅವರು ಈ ಹೇಳಿಕೆ ನೀಡಿದ್ದಾರೆ.

90 ವರ್ಷದ ಡಾ.ಬಾಬಾ ಅಧವ್ ಅವರು ಗುರುವಾರ ನಗರದ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ನಿವಾಸವಾದ ಫುಲೆ ವಾಡಾದಲ್ಲಿ ತಮ್ಮ ಮೂರು ದಿನಗಳ ಪ್ರತಿಭಟನೆಯನ್ನು ಆರಂಭಿಸಿದರು.

ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ(ಎಂವಿಎ) ಮಿತ್ರಪಕ್ಷಗಳಾದ ಕಾಂಗ್ರೆಸ್, ಶಿವಸೇನೆ-ಯುಬಿಟಿ ಮತ್ತು ಎನ್‌ಸಿಪಿ-ಎಸ್‌ಪಿ ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸುತ್ತಿವೆ.

ನವೆಂಬರ್ 20 ರಂದು ನಡೆದ ಚುನಾವಣೆಯಲ್ಲಿ ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಳಗೊಂಡ ಮಹಾಯುತಿ 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದರೆ, ಎಂವಿಎ ಕೇವಲ 46 ಸ್ಥಾನಗಳನ್ನು ಗಳಿಸಿದೆ.

ಅಧವ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ಇವಿಎಂಗಳಿಗೆ ಅಕ್ರಮವಾಗಿ ಮತಗಳನ್ನು ಸೇರಿಸಿರುವ ಬಗ್ಗೆ ಕೆಲವು ನಾಯಕರು ಹೇಳುತ್ತಿರುವ ಹೇಳಿಕೆಗಳಲ್ಲಿ  ಸತ್ಯವಿದೆ. ಆದರೆ ಅದಕ್ಕೆ ತಮ್ಮ ಬಳಿ ಪುರಾವೆಗಳಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಿಂದೆಂದೂ ಕಂಡರಿಯದ ‘ಅಧಿಕಾರ ದುರುಪಯೋಗ’ಹಣ ಮತ್ತು ಅಧಿಕಾರದ ದುರುಪಯೋಗದ ಸಹಾಯದಿಂದ ಇಡೀ ಚುನಾವಣಾ ಕಾರ್ಯವಿಧಾನವನ್ನು ನಿಯಂತ್ರಿಸಲಾಗಿದೆ. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ನಾವು ಅದನ್ನು ನೋಡಿದ್ದೇವೆ ಎಂದರು.