This is the title of the web page
This is the title of the web page

ಕುಸಿಯುತ್ತಿರುವ ಹರಗಾಪುರ ಕೋಟೆಯ ಗುಡ್ಡಕ್ಕೆ ಅಧಿಕಾರಿಗಳ ಬೆಟ್ಟಿ

ಕುಸಿಯುತ್ತಿರುವ ಹರಗಾಪುರ ಕೋಟೆಯ ಗುಡ್ಡಕ್ಕೆ ಅಧಿಕಾರಿಗಳ ಬೆಟ್ಟಿ

ಹುಕ್ಕೇರಿ; ಹುಕ್ಕೇರಿ ತಾಲೂಕಿನ ಹರಗಾಪೂರ ಗ್ರಾಮ ಪಂಚಾಯತಿಯ ಗುಡ್ಡದಲ್ಲಿರುವ ಕೋಟೆಯ ಕಲ್ಲುಗಳು ಜರಿದು ಮನೆಗಳಿಗೆ ಹಾನಿಯಾದಂತೆ ಮುಂಜಾಗ್ರತಾ ಕ್ರಮಕೈಕೊಳ್ಳಲು ತಾಲುಕಾ ಅಡಳಿತ ನೋಡಿಕೊಳ್ಳಬೇಕೇಂದು ಜಿಲ್ಲಾ ಪಂಚಾಯತಿ ಉಪಕಾರ್ಯzರ್ಶಿ ಬಸವರಾಜ ಅಡವಿಮಠ ಸೂಚಿಸಿದರು.
ಅವರು ಹುಕ್ಕೇರಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ಪ್ರವಾಹ, ಅತಿವೃಷ್ಠಿ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲು ಹರಗಾಪುರ ಗ್ರಾಮಕ್ಕೆ ತೆರಳಿ ಗುಡ್ಡದ ಸಮೀಪ ಇರುವ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದರು.
ಸಂಕೇಶ್ವರದ ಪಟ್ಟಣದ ಹಿರಣ್ಯಕೇಶಿ ನದಿಯ ದಡದಲ್ಲಿರುವ ಶಂಕರಲಿAಗ ದೇವಸ್ಥಾನದ ಹತ್ತಿರ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ À ಕಾಳಜಿ ಕೇಂದ್ರಕ್ಕೆ ಭೇಟಿ ಪರಿಶೀಲನೆ ಮಾಡಿದರು. ನದಿ ದಡದಲ್ಲಿರುವ ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ತಹಶಿಲ್ದಾರರ ಮಂಜುಳಾ ನಾಯಕ, ತಾಲೂಕಾ ಯೋಜನಾಧಿಕಾರಿಗಳು ಪ್ರಶಾಂತ ಮುನ್ನೋಳಿ, ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಬಿ. ಮಠದ, ಕಂದಾಯ ನೀರೀಕ್ಷ ಎ.ಎಂ. ಕಮತನೂರ, ಸಂಕೇಶ್ವರ ಸಿ.ಪಿ.ಐ ಎಸ್.ಎಂ. ಅವಜಿ., ಎನ್.ಆರ್. ಪಾಟೀಲ, ಪ್ರಭಾಕರ ಜಿ.ಜೆ. ಉಪಸ್ಥಿತರಿದ್ದರು.